ಅಮೆರಿಕ: 17 ವರ್ಷಗಳಲ್ಲೇ ಮೊದಲ ಮರಣದಂಡನೆಗೆ ಸುಪ್ರೀಂ ಕೋರ್ಟ್ ಅನುಮತಿ

Update: 2020-07-14 14:56 GMT

ವಾಶಿಂಗ್ಟನ್, ಜು. 14: 17 ವರ್ಷಗಳಲ್ಲೇ ಮೊದಲ ಬಾರಿಗೆ ನಡೆಯಲಿರುವ ಫೆಡರಲ್ ಮರಣದಂಡನೆಗೆ ಅಮೆರಿಕದ ಸುಪ್ರೀಂ ಕೋರ್ಟ್ ಮಂಗಳವಾರ ಅನುಮೋದನೆ ನೀಡಿದೆ. ಇದರೊಂದಿಗೆ, ಮರಣ ದಂಡನೆಯನ್ನು ವಿಳಂಬಿಸುವ ಕೆಳ ನ್ಯಾಯಾಲಯದ ಆದೇಶವನ್ನು ಅದು ತಳ್ಳಿಹಾಕಿದೆ.

ಫೆಡರಲ್ (ಕೇಂದ್ರ ಸರಕಾರದ) ಮಟ್ಟದಲ್ಲಿ ನಾಲ್ಕು ಮರಣ ದಂಡನೆಗಳು ಜಾರಿಗೊಳ್ಳಬೇಕಾಗಿತ್ತು. ಆದರೆ, ಜಿಲ್ಲಾ ನ್ಯಾಯಾಲಯವೊಂದು ಮೊದಲ ಮರಣ ದಂಡನೆ ನಡೆಯಬೇಕಾಗಿದ್ದ ಕೆಲವೇ ಗಂಟೆಗಳ ಮೊದಲು ತಡೆಯಾಜ್ಞೆ ನೀಡಿತ್ತು. ಮಾರಣಾಂತಿಕ ಚುಚ್ಚುಮದ್ದುಗಳನ್ನು ನೀಡುವ ಮೊದಲು ಅದನ್ನು ಪ್ರಶ್ನಿಸುವ ಎಲ್ಲ ಕಾನೂನು ಕ್ರಮಗಳಿಗೆ ಅವಕಾಶ ನೀಡಬೇಕಾಗಿದೆ ಎಂದು ಜಿಲ್ಲಾ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತ್ತು.

‘‘ಕೊನೆಯ ಕ್ಷಣದಲ್ಲಿ ಫೆಡರಲ್ ನ್ಯಾಯಾಲಯವೊಂದು ಮಧ್ಯಪ್ರವೇಶಿಸಬೇಕಾದ ಅನಿವಾರ್ಯತೆಯನ್ನು ಈ ಕೈದಿಗಳು ತೋರಿಸಿಲ್ಲ’’ ಎಂದು ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News