ಅಸ್ಸಾಂ ನೆರೆ: 35 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತ, 66 ಸಾವು

Update: 2020-07-15 17:54 GMT

 ಗುವಾಹಟಿ, ಜು. 15: ಅಸ್ಸಾಂನಲ್ಲಿ ನೆರೆ ಪರಿಸ್ಥಿತಿ ಬುಧವಾರ ಕೂಡ ಮುಂದುವರಿದಿದ್ದು, 35 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ. ಇಂದು 6 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ನೆರೆಗೆ ಮೃತಪಟ್ಟವರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ.

ರಾಜ್ಯದ 26 ಜಿಲ್ಲೆಗಳ 3,376 ಗ್ರಾಮಗಳಲ್ಲಿರುವ 35.73 ಲಕ್ಷ ಜನರು ನೆರೆ ಸಂತ್ರಸ್ತರಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರ ಹೇಳಿದೆ. ರಾಜ್ಯದ ಸೊಂತಿಪುರ, ಬಾರ್ಪೇಟ, ಗೋಲಾಘಾಟ್ ಹಾಗೂ ಮೊರಿಗಾಂವ್ ಜಿಲ್ಲೆಗಳಲ್ಲಿ ಬುಧವಾರ ಒಟ್ಟು 6 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಇದರೊಂದಿಗೆ ಈ ವರ್ಷ ನೆರೆಯಿಂದ ಮೃತಪಟ್ಟವರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. ನೆರೆ ಪೀಡಿತ ಜಿಲ್ಲೆಗಳ 19 ಜಿಲ್ಲೆಗಳಿಂದ 36,000 ಜನರನ್ನು 629 ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ನೆರೆಯಲ್ಲಿ ಸಿಲುಕಿಕೊಂಡ 4,000 ಜನರನ್ನು ದೋಣಿ ಬಳಿಸಿ ರಕ್ಷಿಸಲಾಗಿದೆ ಹಾಗೂ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News