ಅಮೆರಿಕ: ಹೊಸ ವೀಸಾ ನಿಮಯ ವಾಪಸ್: ಸಂಭ್ರಮಿಸಿದ ವಿದ್ಯಾರ್ಥಿಗಳು, ಕಾಲೇಜುಗಳು

Update: 2020-07-16 16:09 GMT

ವಾಶಿಂಗ್ಟನ್, ಜು. 16: ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿದೇಶಿ ವಿದ್ಯಾರ್ಥಿಗಳ ಶಾಲೆಗಳು ಸಂಪೂರ್ಣವಾಗಿ ಆನ್ಲೈನ್ ತರಗತಿಗಳನ್ನು ಮಾಡುತ್ತಿದ್ದರೆ, ಅವರು ಅಮೆರಿಕವನ್ನು ತೊರೆಯಬೇಕು ಎನ್ನುವ ನಿಯಮವನ್ನು ಅಮೆರಿಕ ಹಿಂದಕ್ಕೆ ಪಡೆದುಕೊಂಡಿದೆ.

ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಕಲಿಯುತ್ತಿದ್ದು, ಹೊಸ ನಿಯಮದಿಂದಾಗಿ ಅವರು ಗಡಿಪಾರುಗೊಳ್ಳುವ ಭೀತಿಯನ್ನು ಎದುರಿಸುತ್ತಿದ್ದರು.

ನೂತನ ನಿಯಮವನ್ನು ವಿದೇಶಿ ವಿದ್ಯಾರ್ಥಿಗಳು, ಅಮೆರಿಕದ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು ತೀವ್ರವಾಗಿ ವಿರೋಧಿಸಿದ್ದವು.

ನಿಯಮವನ್ನು ಹಾರ್ವರ್ಡ್ ವಿಶ್ವವಿದ್ಯಾನಿಲಯ ಮತ್ತು ಮ್ಯಾಸಚೂಸಿಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಮ್ಐಟಿ)ಗಳು ಅಮೆರಿಕದ ಫೆಡರಲ್ ಜಿಲ್ಲಾ ನ್ಯಾಯಾಲಯವೊಂದರಲ್ಲಿ ಪ್ರಶ್ನಿಸಿದ್ದವು. ನೂರಾರು ಇತರ ಶಾಲೆಗಳು ಮತ್ತು ಕಾಲೇಜುಗಳು ಹಾಗೂ 17 ರಾಜ್ಯಗಳು ಈ ಪ್ರಕರಣದಲ್ಲಿ ಬಳಿಕ ಸೇರಿಕೊಂಡಿದ್ದವು.

ನೂತನ ವೀಸಾ ನಿಯಮವನ್ನು ವಾಪಸ್ ಪಡೆಯುವ ನಿರ್ಧಾರವನ್ನು ಟ್ರಂಪ್ ಆಡಳಿತವು ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News