ಬಡ ಮಕ್ಕಳಿಗೆ ಆರೋಗ್ಯ ಸೇವೆ ನೀಡಲು ಹಣ ಸಂಗ್ರಹಿಸಿದ 15 ವರ್ಷದ ಬಾಲಕ-ಬಾಲಕಿ

Update: 2020-07-16 17:57 GMT

ಹೊಸದಿಲ್ಲಿ: ಆರೋಗ್ಯ ಸೇವೆ ವಂಚಿತ ಬಡ ಮಕ್ಕಳಿಗೆ ಆರೋಗ್ಯ ಸೇವೆಗಳನ್ನು ನೀಡುವ ಸಲುವಾಗಿ 15 ವರ್ಷದ ಸೋದರ ಸಂಬಂಧಿಗಳಿಬ್ಬರು ಮಾಡುತ್ತಿರುವ ಪ್ರಯತ್ನ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ದಿಲ್ಲಿಯ ಶ್ರೀ ರಾಮ ಸ್ಕೂಲ್ ನ ವಿದ್ಯಾರ್ಥಿಗಳಾದ ಅರ್ಜುನ್ ಮತ್ತು ಕಾಯ್ರಾ ‘ಚಿಲ್ಡ್ರನ್ಸ್ ಹೆಲ್ತ್ ಆ್ಯಕ್ಷನ್ ಮ್ಯಾನೇಜ್ ಮೆಂಟ್ ಪ್ರಾಜೆಕ್ಟ’ನ್ನು ರಚಿಸಿದ್ದು, ಈ ಮೂಲಕ ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇದಕ್ಕಾಗಿ ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಿರುವ ಅವರು ಶಾಲೆಗಲ್ಲಿ ಆರೋಗ್ಯ ಕ್ಯಾಂಪ್ ಗಳನ್ನು ನಡೆಸಲಿದ್ದಾರೆ.

“ಸದ್ಯದ ಪರಿಸ್ಥಿತಿಯನ್ನು ಗಮನಿಸುವುದಾದರೆ ಕೊರೋನ ಸದ್ಯಕ್ಕೆ ಮುಗಿಯುವುದಿಲ್ಲ ಎನಿಸುತ್ತಿದೆ. ಹಾಗಾಗಿ  ನಮ್ಮ ಯೋಜನೆಯ ಮುಂದಿನ ಹಂತವಾಗಿ ಹಣ ಸಂಗ್ರಹ ನಡೆಸಲು ಮುಂದಾಗಿದ್ದೇವೆ. ನಾವು ಇನ್ ಸ್ಟಾಗ್ರಾಂ ಪೇಜ್ ಒಂದನ್ನು ಆರಂಭಿಸಿದ್ದೇವೆ. 3 ವಾರಗಳಲ್ಲಿ 2,74,000 ರೂ. ಸಂಗ್ರಹಿಸಲಾಗಿದೆ. ಈ ಅಭಿಯಾನದಿಂದ ಸಂಗ್ರಹಿಸಿದ ಹಣದಲ್ಲಿ ಶಾಲೆಗಳಲ್ಲಿ ಬಡ ಮಕ್ಕಳಿಗಾಗಿ ಆರೋಗ್ಯ ಕ್ಯಾಂಪ್ ಗಳನ್ನು ನಡೆಸಲಿದ್ದೇವೆ” ಎಂದು ಕಾಯ್ರಾ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News