2ನೇ ಟೆಸ್ಟ್: ಆಂಗ್ಲರಿಗೆ ಚೇಸ್ ಆಘಾತ

Update: 2020-07-17 04:45 GMT

ಮ್ಯಾಂಚೆಸ್ಟರ್: ವೆಸ್ಟ್‌ಇಂಡೀಸ್ ವಿರುದ್ಧ ಎರಡನೇ ಕ್ರಿಕೆಟ್ ಟೆಸ್ಟ್‌ನ ಮೊದಲ ದಿನ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ ಆರಂಭಿಕ ಆಘಾತ ಅನುಭವಿಸಿದೆ.

ಮಳೆಯಿಂದಾಗಿ ಗುರುವಾರ ಆಟ ತಡವಾಗಿ ಆರಂಭಗೊಂಡಿತ್ತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 54 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 125 ರನ್ ಗಳಿಸಿದೆ.

 ಡೊಮಿನಿಕ್ ಸಿಬ್ಲೇ ಔಟಾಗದೆ ಅರ್ಧಶತಕ (54) ಮತ್ತು ಬೆನ್ ಸ್ಟೋಕ್ಸ್ ಔಟಾಗದೆ 22 ರನ್ ಗಳಿಸಿ ಹೋರಾಟ ಮುಂದುವರಿಸಿದ್ದಾರೆ.

 ಮೊದಲ ಟೆಸ್ಟ್‌ನಲ್ಲಿ ಸೋಲು ಅನುಭವಿಸಿದ್ದ ಇಂಗ್ಲೆಂಡ್ ತಂಡ 13.2 ಓವರ್‌ಗಳಲ್ಲಿ 29 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್‌ನ್ನು ಕಳೆದುಕೊಂಡಿತು. ಊಟದ ವಿರಾಮಕ್ಕೂ ಮುನ್ನ ಕೊನೆಯ ಓವರ್ ಎರಡನೇ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ರಾರಿ ಬರ್ನ್ಸ್ (15) ಅವರನ್ನು ರೊಸ್ಟನ್ ಚೇಸ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಊಟದ ವಿರಾಮದ ಬಳಿಕ ಕ್ರೀಸ್‌ಗೆ ಆಗಮಿಸಿದ ಝಾಕ್ ಕ್ರೇವ್ಲೇ (0) ಅವರು ಚೇಸ್‌ಗೆ ವಿಕೆಟ್ ಒಪ್ಪಿಸಿ ಬಂದ ದಾರಿಯಲ್ಲೇ ವಾಪಸಾದರು. ನಾಯಕ ಜೋ ರೂಟ್ 23 ರನ್ ಗಳಿಸಿ ಜೋಸೆಫ್ ಎಸೆತದಲ್ಲಿ ಹೋಲ್ಡರ್‌ಗೆ ಕ್ಯಾಚ್ ನೀಡಿದರು. ಬಳಿಕ ಡೊಮಿನಿಕ್‌ಗೆ ಸ್ಟೋಕ್ಸ್ ಜೊತೆಯಾದರು. 8ನೇ ಟೆಸ್ಟ್ ಆಡುತ್ತಿರುವ ಡೊಮಿನಿಕ್ 164 ಎಸೆತಗಳಲ್ಲಿ 2 ಬೌಂಡರಿಗಳ ಸಹಾಯದಿಂದ ಅರ್ಧಶತಕ ದಾಖಸಿದರು.

ವರ್ಣಭೇದ ವಿರೋಧಿ ಅಭಿಯಾನಕ್ಕೆಬೆಂಬಲ

 ಮ್ಯಾಂಚೆಸ್ಟರ್: ಎರಡನೇ ಕ್ರಿಕೆಟ್ ಟೆಸ್ಟ್ ಆರಂಭಕ್ಕೂ ಮುನ್ನ ಗುರುವಾರ ವೆಸ್ಟ್‌ಇಂಡೀಸ್ ಆಟಗಾರರು ಮತ್ತು ಇಂಗ್ಲೆಂಡ್‌ನ ಬ್ಯಾಟ್ಸ್ ಮನ್ ರಾರಿ ಬರ್ನ್ಸ್ ವರ್ಣಭೇದ ನೀತಿ ವಿರೋಧಿ ಅಭಿಯಾನಕ್ಕೆ (ಬ್ಲಾಕ್ ಲೈವ್ ಮ್ಯಾಟರ್) ಕ್ರೀಡಾಂಗಣದಲ್ಲಿ ಮಂಡಿಯೂರಿ ಬೆಂಬಲ ವ್ಯಕ್ತಪಡಿಸಿದರು. ಮೊದಲ ಟೆಸ್ಟ್ ನಲ್ಲೂಇದೇ ರೀತಿ ಆಟಗಾರರು ಬೆಂಬಲ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News