ಗೆಹ್ಲೋಟ್ ಸರಕಾರದಿಂದ ಫೋನ್ ಕದ್ದಾಲಿಕೆ: ಬಿಜೆಪಿ ಆರೋಪ
Update: 2020-07-18 14:36 IST
ಹೊಸದಿಲ್ಲಿ: ರಾಜ್ಯದ ರಾಜಕಾರಣಿಗಳ ಫೋನ್ ಕದ್ದಾಲಿಕೆ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ಅಶೋಕ್ ಗೆಹ್ಲೋಟ್ ಸರಕಾರದ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಹೇಳಿದೆ.
ಸಚಿನ್ ಪೈಲಟ್ ಬಂಡಾಯದ ನಂತರ ಗೆಹ್ಲೋಟ್ ಸರಕಾರ ತನ್ನನ್ನು ರಕ್ಷಿಸುವ ಸಲುವಾಗಿ ಫೋನ್ ಕದ್ದಾಲಿಕೆ ನಡೆಸುತ್ತಿದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.
“ನಾವು ಕಾಂಗ್ರೆಸ್ ಹೈಕಮಾಂಡ್ ಮತ್ತು ಅಶೋಕ್ ಗೆಹ್ಲೋಟ್ ಗೆ ಕೇಳುತ್ತಿರುವ ಗಂಭೀರ ಪ್ರಶ್ನೆಗಳಿವು. ಫೋನ್ ಕದ್ದಾಲಿಕೆ ನಡೆದಿದೆಯೇ?” ಎಂದು ಬಿಜೆಪಿ ಪ್ರಶ್ನಿಸಿದೆ.