×
Ad

ಕೊರೋನ ಚೇತರಿಕೆಯಲ್ಲಿ ದೇಶಕ್ಕಿಂತ ಮುಂಬೈ ಮುಂದೆ

Update: 2020-07-18 21:52 IST

ಮುಂಬೈ, ಜು. 18: ಮುಂಬೈಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 1 ಲಕ್ಷಕ್ಕೆ ತಲುಪಿದ್ದರೂ ಚೇತರಿಕೆ ಪ್ರಮಾಣ ಶೇ. 70ರಷ್ಟಿದೆ. ಇದು ದೇಶದ ಸರಾಸರಿಗಿಂತ ಶೇ. 7ರಷ್ಟು ಹೆಚ್ಚು ಎಂದು ಅಧಿಕೃತ ದತ್ತಾಂಶ ಬಹಿರಂಗಗೊಳಿಸಿದೆ. 

ದೇಶದಲ್ಲಿ ಶುಕ್ರವಾರದ ವರೆಗೆ ಸಕ್ರಿಯ ಕೊರೋನ ಸೋಂಕಿತರ ಸಂಖ್ಯೆ 3,42,756. ಚೇತರಿಕೆಯಾದ ರೋಗಿಗಳ ಸಂಖ್ಯೆ ಸರಿಸುಮಾರು 6.35 ಲಕ್ಷ. ಅಂದರೆ ಶೇ. 63 ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೊ ಶುಕ್ರವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ ತಿಳಿಸಿದೆ. ಮುಂಬೈಯಲ್ಲಿ ಚೇತರಿಕೆಯಾಗುತ್ತಿರುವ ಕೊರೋನ ಸೋಂಕಿತರ ಪ್ರಮಾಣ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿನಿಂದ ಚೇತರಿಕೆಯಾಗುತ್ತಿರುವವರಿಗಿಂತ ಶೇ. 15ರಷ್ಟು ಹೆಚ್ಚಿದೆ. ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿನಿಂದ ಚೇತರಿಕೆಯಾದವರ ಪ್ರಮಾಣ ಶೇ. 55.62 ಎಂದು ಅದು ತಿಳಿಸಿದೆ.

ಮುಂಬೈಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 24,307. ಇದುವರೆಗೆ 67,830 ರೋಗಿಗಳು ಚೇತರಿಕೆಯಾಗಿದ್ದಾರೆ ಎಂದು ಮಹಾರಾಷ್ಟ್ರ ವೈದ್ಯಕೀಯ ಶಿಕ್ಷಣ ಹಾಗೂ ಔಷಧ ಇಲಾಖೆ ಶುಕ್ರವಾರ ಬಿಡುಗಡೆಗೊಳಿಸಿದ ದತ್ತಾಂಶ ಹೇಳಿದೆ. ಮುಂಬೈಯಲ್ಲಿ ಜೂನ್ ಮಧ್ಯಭಾಗದಲ್ಲಿ ಕೊರೋನಾ ಸೋಂಕಿತರ ಚೇತರಿಕೆ ಪ್ರಮಾಣ ಶೇ. 50 ಇತ್ತು. ಅನಂತರ ಬ್ರಹನ್ಮುಂಬೈ ಮಹಾನಗರ ಪಾಲಿಕೆ ರ್ಯಾಪಿಡ್ ಆ್ಯಕ್ಷನ್ ಅಡಿಯಲ್ಲಿ ‘ಮಿಷನ್ ಝಿರೋ’ ಕಾರ್ಯಕ್ರಮ ಆರಂಭಿಸಿತ್ತು. ಕೊರೋನಾ ಸೋಂಕಿತರು ಚೇತರಿಕೆಯಾಗುತ್ತಿರುವ ಪ್ರಮಾಣ ಜುಲೈ 1ರಂದು ಶೇ. 57ಕ್ಕೆ ಹಾಗೂ ಜುಲೈ 15ರಂದು ಶೇ. 70ಕ್ಕೆ ಏರಿಕೆಯಾಗಿತ್ತು ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೊದ ಪತ್ರಿಕಾ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News