18 ತಿಂಗಳಿಂದ ಸಚಿನ್ ಪೈಲಟ್ ಜೊತೆ ಮಾತನಾಡಿಲ್ಲ: ಅಶೋಕ್ ಗೆಹ್ಲೋಟ್

Update: 2020-07-18 17:03 GMT

ಜೈಪುರ, ಜು. 18: ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ 2019ರಿಂದಲೇ ಬಿಜೆಪಿ ಜೊತೆ ಸೇರಿ ಸರಕಾರ ಉರುಳಿಸಲು ಪ್ರಯತ್ನಿಸುತ್ತಿದ್ದರು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. 

ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಗೆಹ್ಲೋಟ್, “ಕಳೆದ ಒಂದೂವರೆ ವರ್ಷದಿಂದ ನಾನು ಹಾಗೂ ಅವರು ಮಾತನಾಡಿಯೇ ಇಲ್ಲ. ಮುಖ್ಯಮಂತ್ರಿಯೊಂದಿಗೆ ಮಾತನಾಡದ, ಅವರ ಸಲಹೆ ತೆಗೆದುಕೊಳ್ಳದ, ಸಂವಾದ ಇರಿಸಿಕೊಳ್ಳದ ಸಚಿವ ಅವರು. ವಿರೋಧ ಇರಬಹುದು. ಆದರೆ, ಪ್ರಜಾಪ್ರಭುತ್ವದಲ್ಲಿ ಸಂವಾದ ಅಗತ್ಯ ಎಂದು ಗೆಹ್ಲೋಟ್ ಹೇಳಿದರು. ನನಗೆ 100ಕ್ಕೂ ಅಧಿಕ ಶಾಸಕರ ಬೆಂಬಲವಿದೆ. ಆದರೆ, ನೀವು ಸರಕಾರವನ್ನು ಉರುಳಿಸಿ ಬಿಜೆಪಿಯ ಬೆಂಬಲದೊಂದಿಗೆ ಸರಕಾರ ರಚಿಸಲು ಬಯಸುತ್ತಿದ್ದೀರಿ. ಜನರು ನಿಮ್ಮನ್ನು ಕ್ಷಮಿಸುವುದಿಲ್ಲ” ಎಂದು ಗೆಹ್ಲೋಟ್ ಹೇಳಿದ್ದಾರೆ. 

ಈ ಬೆಳವಣಿಗೆ ದುರದೃಷ್ಟಕರ. ಆಂತರಿಕ ಭಿನ್ನಾಭಿಪ್ರಾಯಗಳನ್ನು ಆಂತರಿಕವಾಗಿಯೇ ಪರಿಹರಿಸಿಕೊಳ್ಳಬೇಕು. ನೀವು ವಿರೋಧ ಪಕ್ಷದವರ ಜೊತೆ ಸೇರಿಕೊಂಡು ರಾಜಕೀಯ ಮಾಡುವುದಾದರೆ, ಪ್ರಜಾಪ್ರಭುತ್ವಕ್ಕೆ ಅರ್ಥ ಏನಿದೆ ಎಂದು ಗೆಹ್ಲೋಟ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News