×
Ad

ಐಸಿಸಿ ಟ್ವೆಂಟಿ-20 ವಿಶ್ವಕಪ್ ಮುಂದಿನ ವರ್ಷಕ್ಕೆ ಮುಂದೂಡಿಕೆ

Update: 2020-07-20 22:12 IST

ಮುಂಬೈ, ಜು.20: ಕೋವಿಡ್-19 ಕಾರಣದಿಂದಾಗಿ ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಬೇಕಿದ್ದ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್‌ನ್ನು ಮುಂದೂಡಲಾಗಿದೆ.

ಸೋಮವಾರ ನಡೆದ ಐಬಿಸಿ ಮಂಡಳಿ (ಐಸಿಸಿಯ ವಾಣಿಜ್ಯ ಅಂಗಸಂಸ್ಥೆ) ಸಭೆಯ ಬಳಿಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಮಂಡಳಿ(ಐಸಿಸಿ) ಈ ವಿಚಾರವನ್ನು ಪ್ರಕಟಿಸಿದೆ.

ಮೂರು ಐಸಿಸಿ ಕ್ರಿಕೆಟ್ ಇವೆಂಟ್‌ಗಳ ವೇಳಾಪಟ್ಟಿಗೆ ಸ್ಪಷ್ಟತೆ ತರಲು ಮತ್ತು ಮುಂದಿನ ಮೂರು ವರ್ಷಗಳಲ್ಲಿ ಕ್ರಿಕೆಟ್ ಚೇತರಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಅವಕಾಶಗಳನ್ನು ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಮೊದಲು ಟ್ವೆಂಟಿ-20 ವಿಶ್ವಕಪ್ ಅಕ್ಟೋಬರ್ 19ರಿಂದ ನವೆಂಬರ್ 15 ರವರೆಗೆ ಆಯೋಜಿಸಲು ನಿರ್ಧರಿಸಲಾಗಿತ್ತು.ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಆತಿಥ್ಯ ವಹಿಸಲು ಸಾಧ್ಯವಾಗುವುದಿಲ್ಲ ಎಂದು ಈ ಹಿಂದೆ ಕ್ರಿಕೆಟ್ ಆಸ್ಟ್ರೇಲಿಯ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ತಿಳಿಸಿತ್ತು. ಇದೀಗ ಈ ಟೂರ್ನಿಯನ್ನು ಐಸಿಸಿ ಮುಂದೂಡುವ ನಿರ್ಧಾರ ಕೈಗೊಂಡಿದೆ.

ಐಬಿಸಿ ಮಂಡಳಿ ಮುಂದಿನ ವರ್ಷ ಫೆಬ್ರವರಿಯಲ್ಲಿ ನ್ಯೂಝಿಲ್ಯಾಂಡ್‌ನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2021ನ್ನು ನಡೆಸಲು ಸಾಧ್ಯವಾಗುವುದಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುವುದನ್ನು ಮುಂದುವರೆಸಿದೆ. ಈ ಮಧ್ಯೆ, ಈ ಕಾರ್ಯಕ್ರಮದ ಯೋಜನೆ ನಿಗದಿಯಂತೆ ಮುಂದುವರಿಯುತ್ತದೆ.

‘‘ನಾವು ಸಮಗ್ರ ಮತ್ತು ಸಂಕೀರ್ಣ ಆಕಸ್ಮಿಕ ಯೋಜನೆಯನ್ನು ಕೈಗೊಂಡಿದ್ದೇವೆ ಮತ್ತು ಈ ಪ್ರಕ್ರಿಯೆಯ ಮೂಲಕ ಕ್ರೀಡೆಯಲ್ಲಿ ತೊಡಗಿರುವ ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವುದು ನಮ್ಮ ಪ್ರಥಮ ಆದ್ಯತೆಯಾಗಿದೆ’’ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಮನು ಸಾಹ್ನಿ ಹೇಳಿದರು.

‘‘ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ್ನು ಮುಂದೂಡುವ ನಿರ್ಧಾರವನ್ನು ನಮಗೆ ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರ ತೆಗೆದುಕೊಳ್ಳಲಾಗಿದೆ’’.

‘‘ ಟ್ವೆಂಟಿ-20 ವಿಶ್ವಕಪ್ ಮುಂದೂಡುವಿಕೆಯ ಪ್ರಕಟನೆಯು ಬಿಸಿಸಿಐಗೆ ಐಪಿಎಲ್‌ನ್ನು ಆಯೋಜಿಸುವ ಬಗ್ಗೆ ಯೋಜಿಸಲು ಅವಕಾಶ ಮಾಡಿಕೊಟ್ಟಿದೆ. ಇತ್ತೀಚಿನ ವರದಿಗಳ ಪ್ರಕಾರ, ಬಿಸಿಸಿಐ ಸೆಪ್ಟಂಬರ್ ಅಂತ್ಯದಲ್ಲಿ ಮತ್ತು ನವೆಂಬರ್ ಮಧ್ಯದ ನಡುವೆ ಐಪಿಎಲ್ ನ್ನು ಆಯೋಜಿಸುವ ಗುರಿಯನ್ನು ಹೊಂದಿದೆ ಮತ್ತು ಏಶ್ಯಕಪ್‌ನ್ನು ಈಗಾಗಲೇ ಮುಂದೂಡಲಾಗಿದೆ. ಐಪಿಎಲ್ ಟೂರ್ನಿ ಆತಿಥ್ಯ ವಹಿಸಲು ಯುಎಇ ಹೆಚ್ಚಿನ ಆಸಕ್ತಿ ವಹಿಸಿದ್ದರೂ ಐಪಿಎಲ್ ಭಾರತದಲ್ಲಿ ಉಳಿಯುವುದನ್ನು ಖಚಿತ ಪಡಿಸಿಕೊಳ್ಳುವುದು ಬಿಸಿಸಿಐ ಆದ್ಯತೆಯಾಗಿದೆ ಮತ್ತು ಅದನ್ನು ವಿದೇಶಕ್ಕೆ ಸ್ಥಳಾಂತರಿಸುವುದು ಕೊನೆಯ ಉಪಾಯ’’ಎಂದು ಸಾಹ್ನಿ ಹೇಳಿದರು.

ಪುರುಷರ ಐಸಿಸಿ ಈವೆಂಟ್‌ಗಳ ವಿವರ ಇಂತಿವೆ

► ಪುರುಷರ ಐಸಿಸಿ ಟ್ವೆಂಟಿ-20 ವಿಶ್ವಕಪ್: 2021 ಅಕ್ಟೋಬರ್ - ನವಂಬರ್ ನಲ್ಲಿ. ಫೈನಲ್ ಪಂದ್ಯ 14 ನವೆಂಬರ್ 2021.

► ಪುರುಷರ ಐಸಿಸಿ ಟ್ವೆಂಟಿ- 20 ವಿಶ್ವಕಪ್: 2022 ಅಕ್ಟೋಬರ್ - ನವಂಬರ್‌ನಲ್ಲಿ. ಫೈನಲ್ ಪಂದ್ಯ 13 ನವೆಂಬರ್ 2022.

► ಪುರುಷರ ಐಸಿಸಿ ಕ್ರಿಕೆಟ್ ವಿಶ್ವಕಪ್: ಭಾರತದಲ್ಲಿ 2023 ಅಕ್ಟೋಬರ್ - ನವಂಬರ್‌ನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News