×
Ad

ರಾಜಸ್ಥಾನದ ರಾಜಕೀಯ ಬಿಕ್ಕಟ್ಟು: ಶುಕ್ರವಾರ ತನಕ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Update: 2020-07-21 15:14 IST

ಜೈಪುರ,ಜು.21: ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಗೆ ಗೈರು ಹಾಜರಾಗಿರುವುದಕ್ಕೆ ಅನರ್ಹತೆಯ ನೋಟಿಸ್ ಕಳುಹಿಸಿದ್ದ ವಿಧಾನಸಭೆಯ ಸ್ಪೀಕರ್ ಕ್ರಮವನ್ನು ಪ್ರಶ್ನಿಸಿ ಸಚಿನ್ ಪೈಲಟ್ ನೇತೃತ್ವದ ಬಣ ರಾಜಸ್ಥಾನ ಹೈಕೋರ್ಟ್ ಮೊರೆ ಹೋಗಿದ್ದು, ನಿನ್ನೆ ಹಾಗೂ ಇಂದು ವಾದ ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿರಿಸಿದೆ. ಹೀಗಾಗಿ ಪೈಲಟ್ ಬಣ ಶುಕ್ರವಾರದ ತನಕ ನಿಟ್ಟುಸಿರುಬಿಡುವಂತಾಗಿದೆ.

ಪೈಲಟ್ ಬಣ ಪರ ಇಂದು ವಾದ ಮಂಡಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ "ಸ್ಪೀಕರ್ ಅವರು ಅನರ್ಹತೆಯ ನೋಟಿಸ್ ಜಾರಿಗೊಳಿಸುವ ಮೊದಲು ತಮ್ಮ ತಲೆಗೆ ಸ್ವಲ್ಪವೂ ಕೆಲಸ ಕೊಟ್ಟಂತೆ ಕಾಣುತ್ತಿಲ್ಲ. ನೋಟಿಸ್‍ಗೆ ಉತ್ತರಿಸಲು ಸಾಕಷ್ಟು ಕಾಲಾವಕಾಶ ನೀಡುವ ಅಗತ್ಯವಿತ್ತು'' ಎಂದರು.
ಇದೇ ವೇಳೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಂದು ಜೈಪುರದಲ್ಲಿ ಮೂರನೇ ಬಾರಿ ಕಾಂಗ್ರೆಸ್ ಶಾಸಕರ ಸಭೆ ನಡೆಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News