ಗಲ್ವಾನ್ ನಲ್ಲಿ ಹುತಾತ್ಮರಾಗಿದ್ದ ಕರ್ನಲ್ ಸಂತೋಷ್ ಬಾಬು ಪತ್ನಿ ಡೆಪ್ಯುಟಿ ಕಲೆಕ್ಟರ್ ಆಗಿ ನೇಮಕ
Update: 2020-07-23 14:19 IST
ಹೈದರಾಬಾದ್, ಜು.23: ಕಳೆದ ತಿಂಗಳು ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರೊಂದಿನ ಹಿಂಸಾತ್ಮಕ ಸಂಘರ್ಷದಲ್ಲಿ ಹುತಾತ್ಮರಾಗಿರುವ ಕರ್ನಲ್ ಸಂತೋಷ್ ಬಾಬು ಅವರ ಪತ್ನಿ ಡೆಪ್ಯುಟಿ ಕಲೆಕ್ಟರ್ ಆಗಿ ನೇಮಕಗೊಂಡಿದ್ದಾರೆ.
ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಬುಧವಾರ ಹಿರಿಯ ಅಧಿಕಾರಿಗಳು ಹಾಗೂರಾಜ್ಯ ಸಚಿವರ ಸಮ್ಮುಖದಲ್ಲಿ ಸಂತೋಷ್ ಬಾಬು ಪತ್ನಿಗೆ ನೇಮಕಾತಿಯ ಪತ್ರ ಹಸ್ತಾಂತರಿಸಿದರು.
4 ವರ್ಷದ ಪುತ್ರ ಹಾಗೂ 8 ವರ್ಷದ ಪುತ್ರಿಯನ್ನು ಹೊಂದಿರುವ ಸಂತೋಷ್ ಅವರ ಪತ್ನಿಗೆ ಹೈದರಾಬಾದ್ ಹಾಗೂ ಸುತ್ತಮುತ್ತವೇ ಕರ್ತವ್ಯಕ್ಕೆ ನಿಯೋಜಿಸಬೇಕೆಂದು ಸಿಎಂ ರಾವ್ ಆದೇಶಿಸಿದರು.
39 ಹರೆಯದ ಕರ್ನಲ್ ಸಂತೋಷ್ ಬಾಬು ಸಹಿತ 20 ಸೈನಿಕರು ಜೂನ್ 15ರಂದು ಚೀನಾ ಸೈನಿಕರೊಂದಿಗೆ ಗಲ್ವಾನ್ ಕಣಿವೆಯಲ್ಲಿ ನಡೆದಿದ್ದ ಸಂಘರ್ಷದಲ್ಲಿ ಹುತಾತ್ಮರಾಗಿದ್ದರು.