ಅಯೋಧ್ಯೆ ರಾಮಮಂದಿರ ನಿರ್ಮಾಣದೊಂದಿಗೆ ಕೋವಿಡ್-19 ಅಂತ್ಯ: ಮಧ್ಯಪ್ರದೇಶ ಸ್ಪೀಕರ್ ರಾಮೇಶ್ವರ
Update: 2020-07-23 14:42 IST
ಹೊಸದಿಲ್ಲಿ, ಜು.23:ಈತನಕ ದೇಶಾದ್ಯಂತ 12 ಲಕ್ಷಕ್ಕೂ ಅಧಿಕ ಜನರಿಗೆ ಹಬ್ಬಿರುವ ಕೊರೋನ ವೈರಸ್ ಸೋಂಕು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದೊಂದಿಗೆ ಅಂತ್ಯವಾಗಲಿದೆ ಎಂದು ಮಧ್ಯಪ್ರದೇಶ ವಿಧಾನಸಭೆಯ ಪ್ರೊಟೆಮ್ ಸ್ಪೀಕರ್ ರಾಮೇಶ್ವರ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
"ಭಗವಾನ್ ರಾಮ ಮಾನವ ಕುಲದ ಕಲ್ಯಾಣಕ್ಕಾಗಿ ಹಾಗು ಆ ಸಮಯದಲ್ಲಿ ರಾಕ್ಷಸರನ್ನು ಕೊಲ್ಲಲು ಪುನರ್ಜನ್ಮ ಪಡೆದಿದ್ದರು. ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗುವುದರೊಂದಿಗೆ ಕೊರೋನವೈರಸ್ ಸಾಂಕ್ರಾಮಿಕ ರೋಗ ನಾಶವಾಗಲಿದೆ'' ಎಂದರು.
"ಭಾರತ ಮಾತ್ರವಲ್ಲ ಇಡೀ ವಿಶ್ವ ಕೊರೋನ ವೈರಸ್‌ನಿಂದ ಬಾಧಿತವಾಗಿದೆ. ನಾವು ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಜೊತೆಗೆ ನಮ್ಮ ಪವಿತ್ರ ವ್ಯಕ್ತಿಗಳನ್ನು ನೆನಪಿಸಿಕೊಳ್ಳಬೇಕಾಗಿದೆ.ರಾಮ ಮಂದಿರ ನಿರ್ಮಿಸಲಾಗುವುದೆಂದು ಸುಪ್ರೀಂಕೋರ್ಟ್ ಹೇಳಿದೆ'' ಎಂದು ಸುದ್ದಿಸಂಸ್ಥೆ ಎಎನ್‌ಐಗೆ ಶರ್ಮಾ ಹೇಳಿದ್ದಾರೆ.