ಭಾರತ 20 ಕ್ಷೇತ್ರಗಳಲ್ಲಿ ಜಾಗತಿಕ ಪೂರೈಕೆದಾರನಾಗಬಹುದು: ಪಿಯೂಷ್ ಗೋಯಲ್

Update: 2020-07-23 16:56 GMT

ಹೊಸದಿಲ್ಲಿ, ಜು.23: ಸ್ಥಳೀಯ ಬೇಡಿಕೆಗಳನ್ನು ಪೂರೈಸುವುದರ ಜೊತೆಗೆ ಭಾರತವು ಜಾಗತಿಕ ಪೂರೈಕೆದಾರನಾಗ ಬಹುದಾದ 20 ಕ್ಷೇತ್ರಗಳನ್ನು ಗುರುತಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಗುರುವಾರ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಕೈಗಾರಿಕಾ ಮಂಡಳಿ ಎಫ್‌ಐಸಿಸಿಐ ಹಾಗೂ ಇತರ ಸಂಘಟನೆಗಳು ಸರಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಆಹಾರ ಸಂಸ್ಕರಣೆ, ಸಾವಯವ ಕೃಷಿ, ಆಗ್ರೊ ಕೆಮಿಕಲ್ಸ್, ಇಲೆಕ್ಟ್ರಾನಿಕ್ಸ್, ಕೈಗಾರಿಕಾ ಯಂತ್ರೋಪಕರಣ, ಪೀಠೋಪಕರಣ, ಚರ್ಮ, ಮೋಟಾರು ವಾಹನ ಬಿಡಿಭಾಗ, ಜವಳಿ ಸೇರಿದಂತೆ ಆರಂಭದಲ್ಲಿ 12 ಕ್ಷೇತ್ರಗಳನ್ನು ಗುರುತಿಸಿದ್ದರೆ ಈಗ ಮತ್ತೆ 8 ಕ್ಷೇತ್ರಗಳನ್ನು ಗುರುತಿಸಿದ್ದೇವೆ. ದೇಶದಲ್ಲಿ ನುರಿತ ಕುಶಲಕರ್ಮಿ ಹಾಗೂ ಬಡಗಿಗಳಿದ್ದರೂ ಭಾರತವು ಪೀಠೋಪಕರಣಗಳ ಆಮದನ್ನು ಮುಂದುವರಿಸಿದೆ. ವಿಶ್ವಕ್ಕೇ ಪೀಠೋಪಕರಣಗಳನ್ನು ಪೂರೈಸುವ ಸಾಮರ್ಥ್ಯ ನಮ್ಮಲ್ಲಿಲ್ಲವೇ ಎಂದವರು ಪ್ರಶ್ನಿಸಿದ್ದಾರೆ.

ಯೋಗದ ಕುರಿತು ವಿಶ್ವದಲ್ಲಿ ಕುತೂಹಲವಿದೆ. ಈ ಕುತೂಹಲವನ್ನು ಅವಕಾಶವನ್ನಾಗಿ ಪರಿವರ್ತಿಸುವ ಸಾಮರ್ಥ್ಯದ ಯೋಗಪಟುಗಳು ಭಾರತದಲ್ಲಿದ್ದಾರೆ. ಪ್ರಧಾನಿ ಮೋದಿಯ ದೂರದೃಷ್ಟಿಯಿಂದಾಗಿ ಭಾರತೀಯರಿಗೆ ಅವಕಾಶಗಳ ಹೆಬ್ಬಾಗಿಲು ತೆರೆದಿದೆ. ಅದನ್ನು ಸದುಪಯೋಗಪಡಿಸಿಕೊಳ್ಳುವ ಇಚ್ಛಾಶಕ್ತಿ ನಮ್ಮಲ್ಲಿರಬೇಕು ಎಂದು ಗೋಯಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News