×
Ad

ಕೊರೋನ ಸೋಂಕು: 6 ರಾಜ್ಯಗಳ ಉಪಚುನಾವಣೆ ಮುಂದೂಡಿಕೆ

Update: 2020-07-23 22:28 IST

ಹೊಸದಿಲ್ಲಿ, ಜು.23: ಕೊರೋನ ಸೋಂಕು ಹಾಗೂ ನೆರೆಹಾವಳಿಯಿಂದಾಗಿ 6 ರಾಜ್ಯಗಳ 8 ಕ್ಷೇತ್ರಗಳಿಗೆ ನಡೆಯಬೇಕಿದ್ದ ಉಪಚುನಾವಣೆಯನ್ನು ಸೆಪ್ಟೆಂಬರ್ 7ರವರೆಗೆ ಮುಂದೂಡಿರುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ.

ಬಿಹಾರ(ವಾಲ್ಮೀಕಿ ನಗರ ಸಂಸದೀಯ ಕ್ಷೇತ್ರ), ಅಸ್ಸಾಂ(ಸಿಬ್ಸಾಗರ್ ವಿಧಾನಸಭಾ ಕ್ಷೇತ್ರ), ತಮಿಳುನಾಡು( ತಿರುವೊಟ್ಟಿಯೂರು ಸಂಸದೀಯ ಕ್ಷೇತ್ರ, ಗುಡಿಯಟ್ಟಂ ವಿಧಾನಸಭಾ ಕ್ಷೇತ್ರ), ಮಧ್ಯಪ್ರದೇಶ(ಅಗರ್ ವಿಧಾನಸಭಾ ಕ್ಷೇತ್ರ), ಉತ್ತರಪ್ರದೇಶ(ಬುಲಂದರ್ ಮತ್ತು ತುಂಡ್ಲಾ ವಿಧಾನಸಭಾ ಕ್ಷೇತ್ರ) ಮತ್ತು ಕೇರಳ (ಚಾವರ ವಿಧಾನಸಭಾ ಕ್ಷೇತ್ರ)ಗಳಲ್ಲಿ ಉಪಚುನಾವಣೆ ಮುಂದೂಡಲಾಗಿದೆ.

ದೇಶದ ವಿವಿಧ ಭಾಗಗಳಲ್ಲಿ ಕೊರೋನ ಪರಿಸ್ಥಿತಿ ಸುಧಾರಿಸದ ಕಾರಣ ಈ ಪರಿಸ್ಥಿತಿಯಲ್ಲಿ ನಾಗರಿಕರ ಆರೋಗ್ಯಕ್ಕೆ ಅಪಾಯ ಒಡ್ಡಲು ಸಾಧ್ಯವಿಲ್ಲ. ಆದ್ದರಿಂದ ಚುನಾವಣೆ ನಡೆಸಲು ಪರಿಸ್ಥಿತಿ ಅನುಕೂಲಕರವಾದ ಬಳಿಕ ಚುನಾವಣೆ ನಡೆಸಲಾಗುತ್ತದೆ. ಅಲ್ಲದೆ, ಕೆಲವು ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದ್ದು ಪ್ರವಾಹ ಸ್ಥಿತಿ ನೆಲೆಸಿದೆ. ಜಿಲ್ಲಾಡಳಿತ ನೆರೆ ನಿಯಂತ್ರಣ ಮತ್ತು ಸ್ಥಳಾಂತರ ಕಾರ್ಯದಲ್ಲಿ ಮಗ್ನವಾಗಿದ್ದು ಇದು ಚುನಾವಣಾ ಚಟುವಟಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಆದ್ದರಿಂದ ಚುಣಾವಣೆಯನ್ನು ಮುಂದೂಡಿರುವುದಾಗಿ ಆಯೋಗ ಹೇಳಿದೆ.

ನಿಯಮದ ಪ್ರಕಾರ, ಖಾಲಿ ಇರುವ ಕ್ಷೇತ್ರಗಳಿಗೆ ಆರು ತಿಂಗಳೊಳಗೆ ಉಪಚುನಾವಣೆ ನಡೆಯಬೇಕು( ಸಂಬಂಧಿತ ಕ್ಷೇತ್ರಗಳ ಕಾರ್ಯಾವಧಿ ಕನಿಷ್ಟ 1 ವರ್ಷ ಇದ್ದರೆ ಮಾತ್ರ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News