×
Ad

ತಮಿಳುನಾಡು: ರಾಜಭವನದ 84 ಕೆಲಸಗಾರರಿಗೆ ಕೊರೋನ ಸೋಂಕು

Update: 2020-07-23 22:56 IST

ಚೆನ್ನೈ, ಜು.23: ತಮಿಳುನಾಡಿನ ರಾಜ್ಯಪಾಲರ ಸರಕಾರಿ ನಿವಾಸ ರಾಜಭವನದಲ್ಲಿ ಕೆಲಸ ಮಾಡುತ್ತಿದ್ದ ಭದ್ರತಾ ಸಿಬಂದಿ, ಅಗ್ನಿಶಾಮಕ ದಳದ ಸಿಬಂದಿ ಸಹಿತ 84 ಜನರಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಸಂಪೂರ್ಣ ರಾಜಭವನ ಸಂಕೀರ್ಣವನ್ನು ಸ್ಯಾನಿಟೈಸ್ ಮಾಡಿರುವುದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ರಾಜಭವನದ ಒಳಗೆ ಇರುವ ಕೆಲವು ಜನರಲ್ಲಿ ಕೊರೋನ ಸೋಂಕಿನ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ 147 ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 84 ಜನರಲ್ಲಿ ಸೋಂಕು ದೃಢಪಟ್ಟಿದೆ. ಇವರನ್ನು ಆರೋಗ್ಯ ಇಲಾಖೆ ಕ್ವಾರಂಟೈನ್‌ಗೆ ಒಳಪಡಿಸಿದೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.

ಆದರೆ, ಸೋಂಕು ದೃಢಪಟ್ಟವರೆಲ್ಲಾ ರಾಜಭವನದ ಮುಖ್ಯದ್ವಾರದಿಂದ ಹೊರಗೆ ಕೆಲಸ ಮಾಡುವವರು. ಇವರಲ್ಲಿ ಯಾರೊಬ್ಬರೂ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅಥವಾ ರಾಜಭವನದ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಲಿಲ್ಲ ಎಂದು ರಾಜಭವನದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News