ಸೋಂಕು ಹರಡಿದರೂ ಪರವಾಗಿಲ್ಲ, ಮಕ್ಕಳು ಶಾಲೆಗೆ ಹೋಗಬೇಕು ಎಂದ ಶ್ವೇತಭವನ !

Update: 2020-07-25 16:52 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್, ಜು. 25: ಶಾಲೆಗಳಲ್ಲಿ ಕೊರೋನ ವೈರಸ್ ಸೋಂಕು ಹರಡುತ್ತಿದ್ದರೂ ಸರಿಯೇ, ಮಕ್ಕಳು ಶಾಲೆಗೆ ಹೋಗಬೇಕು ಎಂದು ಅಮೆರಿಕದ ಅಧ್ಯಕ್ಷೀಯ ಕಚೇರಿ ಮತ್ತು ನಿವಾಸ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಲೀ ಮೆಕೆನಾನಿ ಹೇಳಿದ್ದಾರೆ.

ಕೊರೋನ ವೈರಸ್ ದೇಶವನ್ನು ಆಕ್ರಮಿಸಲು ಆರಂಭಿಸುತ್ತಿದ್ದಾಗ ಹಠಾತ್ತನೆ ಮುಚ್ಚಿದ್ದ ಶಾಲೆಗಳನ್ನು ಪುನರಾರಂಭಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ.

ಮಕ್ಕಳು ಶಾಲೆಗೆ ಹೋದರೆ ಅವರು ಮಾರಕ ಕೊರೋನ ವೈರಸ್ ರೋಗದ ಸೋಂಕಿಗೆ ಒಳಗಾಗಬಹುದು ಎಂಬ ಕಳವಳವನ್ನು ಶಿಕ್ಷಕರು ಮತ್ತು ಹೆತ್ತವರು ಹೊಂದಿರುವ ಹೊರತಾಗಿಯೂ ಟ್ರಂಪ್ ತನ್ನ ನಿರ್ಧಾರದಲ್ಲಿ ದೃಢತೆ ಹೊಂದಿದ್ದಾರೆ. ಶಾಲೆಗಳು ಆರಂಭವಾದರೆ, ದೇಶದಲ್ಲಿ ಸಾಮಾನ್ಯ ಪರಿಸ್ಥಿತಿ ಎಂಬುದಾಗಿ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಬಿಂಬಿಸಿಕೊಳ್ಳುವುದು ಟ್ರಂಪ್‌ರ ಉದ್ದೇಶವಾಗಿದೆ.

‘‘ಶಾಲೆಗಳಲ್ಲಿ ಸೋಂಕು ಹರಡಿದರೂ ಸರಿಯೇ, ಮಕ್ಕಳು ಶಾಲೆಗೆ ಹೋಗಬೇಕು ಎಂದು ನಾವು ನಂಬಿದ್ದೇವೆ. ಯಾಕೆಂದರೆ, ಶಾಲೆಗಳಿಂದ ಹೊರಗಿರುವುದು ಮಕ್ಕಳ ಮೇಲೆ ಅಗಾಧ ಪರಿಣಾಮ ಬೀರಲಿದೆ. ಇದು ವೈಜ್ಞಾನಿಕ ಸತ್ಯ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮೆಕೆನಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News