ಆನ್‌ಲೈನ್ ಶಿಕ್ಷಣ ವಂಚಿತ 43 ಲಕ್ಷ ವಿಕಲಚೇತನ ಮಕ್ಕಳು ಅರ್ಧದಲ್ಲೇ ಶಿಕ್ಷಣ ತ್ಯಜಿಸುವ ಅಪಾಯ: ವರದಿ

Update: 2020-07-25 17:29 GMT

ಭುವನೇಶ್ವರ, ಜು.25: ಕೊರೋನ ಸೋಂಕಿನಿಂದಾಗಿ ಆರಂಭಿಸಲಾಗಿರುವ ಆನ್‌ಲೈನ್/ ಡಿಜಿಟಲ್ ಮಾಧ್ಯಮ ಶಿಕ್ಷಣ ಕ್ರಮದಿಂದ ಒಡಿಶಾ ಸಹಿತ ದೇಶದ ಹಲವು ರಾಜ್ಯಗಳಲ್ಲಿರುವ 43 ಲಕ್ಷ ವಿಕಲಚೇತನ ಮಕ್ಕಳು ಹೊರಗುಳಿಯಲಿದ್ದು, ಶಿಕ್ಷಣ ವನ್ನು ಅರ್ಧದಲ್ಲೇ ತ್ಯಜಿಸುವ ಅಪಾಯ ಎದುರಿಸುತ್ತಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.

ಸ್ವಾಭಿಮಾನ್ ಎಂಬ ಸಂಘಟನೆ ಹಾಗೂ ‘ಡಿಸೆಬಿಲಿಟಿ ಲೆಜಿಸ್ಲೇಷನ್ ಯುನಿಟ್ ಆಫ್ ಈಸ್ಟರ್ನ್ ಇಂಡಿಯಾ ಆ್ಯಂಡ್ ಪಾರ್ಟ್ನರ್ ಆಫ್ ಸೆಂಟರ್ ಫಾರ್ ಅಡ್ವೊಕೆಸಿ ಆ್ಯಂಡ್ ರಿಸರ್ಚ್(ಸಿಎಫ್‌ಎಆರ್)’ ಸಂಘಟನೆ ನಡೆಸಿದ ಸಮೀಕ್ಷೆಯ ವರದಿಯನ್ನು ಜುಲೈ 23ರಂದು ಮಾಧ್ಯಮಗಳಿಗೆ ಬಿಡುಗಡೆಗೊಳಿಸಲಾಗಿದೆ.

ಆನ್‌ಲೈನ್ ಶಿಕ್ಷಣಕ್ಕೆ ಬಳಸಲಾಗುವ ಸ್ಮಾರ್ಟ್‌ ಫೋನ್‌ ಗಳನ್ನು ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕಳು ಹೊಂದಿರುವುದಿಲ್ಲ ಎಂಬುದು ವಾಸ್ತವವಾಗಿದೆ. ಒಡಿಶಾ ಸಹಿತ 10 ರಾಜ್ಯಗಳಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ, 43% ಮಕ್ಕಳು( 1 ಕೋಟಿಯಲ್ಲಿ) ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂಬುದು ತಿಳಿದು ಬಂದಿದೆ ಎಂದು ‘ಸ್ವಾಭಿಮಾನ್’ನ ಸ್ಥಾಪಕಿ ಡಾ. ಶೃತಿ ಮೊಹಾಪಾತ್ರ ಹೇಳಿದ್ದಾರೆ.

ಕೊರೋನ ಹಾವಳಿಯ ಈ ಸಂದರ್ಭದಲ್ಲಿ ವಿಕಲಚೇತನ ಮಕ್ಕಳ ಬಗ್ಗೆ ಸರಕಾರ ನಿರ್ಲಕ್ಷದ ಧೋರಣೆ ತಳೆದಿರುವುದು ಎರಡೂ ಸಮೀಕ್ಷೆಗಳಿಂದ ವ್ಯಕ್ತವಾಗಿದೆ. ಈ ಮಕ್ಕಳಿಗೆ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News