ಚೀನಾದಲ್ಲಿ 46 ಹೊಸ ಕೊರೋನ ಕೇಸ್

Update: 2020-07-26 16:21 GMT

ಬೀಜಿಂಗ್, ಜು.26: ಕೊರೋನ ವೈರಸ್ ಸೋಂಕಿನ ಉಗಮರಾಷ್ಟ್ರವಾದ ಚೀನಾದಲ್ಲಿ ರವಿವಾರ 46 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಕಳೆದ ಕೆಲವು ದಿನಗಳಲ್ಲಿ ಚೀನಾದಲ್ಲಿ ಮತ್ತೆ ಕೊರೋನ ಹಾವಳಿ ತಲೆಯೆತ್ತಿದ್ದು, ದೇಶದ ವಿವಿಧೆಡೆ 160ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಕ್ಸಿನ್‌ಜಿಯಾಂಗ್ ಪ್ರಾಂತದ ನಗರವಾದ ಉರುಮಿಕಿಯಲ್ಲಿ 22 ಪ್ರಕರಣಗಳು ದೃಢಪಟ್ಟಿವೆಯೆಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದರೊಂದಿಗೆ ಚೀನಾದಲ್ಲಿ ಕಳೆದ 10 ದಿನಗಳಲ್ಲಿ ಕೊರೋನ ಸೋಂಕಿನ 137 ಪ್ರಕರಣಗಳು ವರದಿಯಾದಂತಾಗಿದೆ. ಕಳೆದ ವರ್ಷಾಂತ್ಯದಲ್ಲಿ ಕೊರೋನ ವೈರಸ್ ಹಾವಳಿ ಕಾಣಿಸಿಕೊಂಡ ಚೀನಾದಲ್ಲಿ ಈವರೆಗೆ 83,830 ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಒಟ್ಟು 4634 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News