×
Ad

ಕ್ಸಿಜಿನ್ ಪಿಂಗ್ ಟೀಕಿಸಿದ್ದ ಚೀನಿ ಕಮ್ಯೂನಿಸ್ಟ್ ನಾಯಕನ ಉಚ್ಚಾಟನೆ

Update: 2020-07-26 21:54 IST
ಕ್ಸಿಜಿನ್ ಪಿಂಗ್

ಕೋವಿಡ್, ಜು.26: ಕೋವಿಡ್-19 ಸಮಸ್ಯೆಗೆ ಸಂಬಂಧಿಸಿ ಚೀನಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿರುದ್ಧ ಬಹಿರಂಗವಾಗಿ ಟೀಕಿಸಿದ್ದ ಚೀನಾ ಕಮ್ಯೂನಿಸ್ಟ್ ಪಕ್ಷದ ಉನ್ನತ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಸರಕಾರಿ ಸ್ವಾಮ್ಯದ ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ಅಧ್ಯಕ್ಷರಾಗಿದ್ದ ರೆನ್ ಷೂಶಾಂಗ್ ಉಚ್ಚಾಟಿತರಾದ ಚೀನಿ ಕಮ್ಯೂನಿಸ್ಟ್ ಪಕ್ಷದ ನಾಯಕ. ಅವರು ಕಳೆದ ಮಾರ್ಚ್‌ನಿಂದ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಕೋವಿಡ್-19 ನಿರ್ವಹಣೆ ಹಾಗೂ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗೆ ಹೇರಲಾದ ಸೆನ್ಸಾರ್‌ಶಿಪ್‌ನ ವಿರುದ್ಧ ಷೂಶಾಂಗ್ ಅವರು ಕ್ಸಿಜಿನ್ ಪಿಂಗ್ ಆಡಳಿತವನ್ನು ಟೀಕಿಸಿ ಲೇಖನ ಬರೆದಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಂಡಿರಬೇಕೆಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News