ಟೆಸ್ಟ್‌ನಲ್ಲಿ 2,000 ರನ್, 100 ವಿಕೆಟ್ ಪಡೆದ ವಿಂಡೀಸ್‌ನ 3ನೇ ಆಟಗಾರ ಹೋಲ್ಡರ್

Update: 2020-07-26 17:14 GMT

ಮ್ಯಾಂಚೆಸ್ಟರ್, ಜು.26: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಟೆಸ್ಟ್ ಕ್ರಿಕೆಟ್‌ನಲ್ಲಿ 2,000 ರನ್ ಮತ್ತು 100 ವಿಕೆಟ್ ಪಡೆದ 3ನೇ ಕೆರಿಬಿಯನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರವಿವಾರ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ ನಿರ್ಧರಿಸುವ ಅಂತಿಮ ಟೆಸ್ಟ್‌ನ ಮೂರನೇ ದಿನದಂದು ವೆಸ್ಟ್ ಇಂಡೀಸ್‌ನ ಮೊದಲ ಇನಿಂಗ್ಸ್‌ನಲ್ಲಿ 28 ವರ್ಷದ ಆಲ್‌ರೌಂಡರ್ ಹೋಲ್ಡರ್ ವಿಶಿಷ್ಟ ಸಾಧನೆ ಮಾಡಿದ್ದಾರೆ.

2019ರ ಸೆಪ್ಟೆಂಬರ್‌ನಲ್ಲಿ ನಡೆದ 48ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಹನುಮ ವಿಹಾರಿ ಅವರನ್ನು ಔಟು ಮಾಡುವ ಮೂಲಕ ಈಗಾಗಲೇ 100 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದ ಹೋಲ್ಡರ್ 59 ನೇ ಓವರ್‌ನಲ್ಲಿ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಎರಡು ರನ್ ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 2,000 ರನ್ ಗಳಿಸಿದರು. ತನ್ನ 43 ನೇ ಟೆಸ್ಟ್‌ನಲ್ಲಿ ಈ ಸಾಧನೆ ಮಾಡುವ ಮೂಲಕ ಹೋಲ್ಡರ್ ಅವರು ಗ್ಯಾರಿ ಸೋಬರ್ಸ್ (8,032 ರನ್ ಮತ್ತು 235 ವಿಕೆಟ್) ಮತ್ತು ಕಾರ್ಲ್ ಹೂಪರ್ (5,762 ರನ್ ಮತ್ತು 114 ವಿಕೆಟ್) ನಂತರ 2,000 ರನ್ ಮತ್ತು 100 ವಿಕೆಟ್‌ಗಳನ್ನು ಕಬಳಿಸಿದ ಮೂರನೇ ವೆಸ್ಟ್ ಇಂಡೀಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News