ಐಪಿಎಲ್‌ಗಿಂತ ಮೊದಲೇ ಯುಎಇ ತಲುಪಲಿರುವ ಚೆನ್ನೈ ಸೂಪರ್ ಕಿಂಗ್ಸ್

Update: 2020-07-26 17:27 GMT

ಚೆನ್ನೈ, ಜು.26: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಐಪಿಎಲ್ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನ 13ನೇ ಆವೃತ್ತಿಯಲ್ಲಿ ಆಡಲು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಪ್ರಯಾಣಿಸಲಿರುವ ಮೊದಲ ತಂಡವಾಗಿದೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

ಆಗಸ್ಟ್ 20 ರೊಳಗೆ ಹೆಚ್ಚಿನ ತಂಡಗಳು ಯುಎಇ ತಲುಪುವ ನಿರೀಕ್ಷೆಯಿದ್ದರೆ, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಮತ್ತು ಪಂದ್ಯಾವಳಿಯ ತಯಾರಿಗೆ ಆಗಸ್ಟ್ ಎರಡನೇ ವಾರದಲ್ಲಿ ಸಿಎಸ್‌ಕೆ ತೆರಳಲಿದೆ.

ಕಳೆದ ವರ್ಷ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿದ್ದ ಸಿಎಸ್‌ಕೆ ರನ್ನರ್ಸ್ ಅಪ್ ಆಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗ ದಿಂದಾಗಿ ಪಂದ್ಯಾವಳಿ ಯನ್ನು ಮುಂದೂಡುವ ಮೊದಲು ಸಿಎಸ್‌ಕೆ ಈ ವರ್ಷದ ಮಾರ್ಚ್ ಆರಂಭದಲ್ಲಿ ತನ್ನ ಸಿದ್ಧತೆ ಗಳನ್ನು ಪ್ರಾರಂಭಿಸಿತು.

ಕೆಲವು ಪ್ರಮುಖ ಆಟಗಾರರು ಪ್ರತ್ಯೇಕವಾಗಿ ತರಬೇತಿ ಪಡೆಯುತ್ತಿದ್ದಾರೆ. ವಿಶೇಷವೆಂದರೆ, ಸುರೇಶ್ ರೈನಾ ಅವರು ಪಿಯೂಷ್ ಚಾವ್ಲಾ ಮತ್ತು ರಿಷಭ್ ಪಂತ್ ನೆಟ್ ಅಭ್ಯಾಸ ನಡೆಸುತ್ತಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ಯುಎಇಯಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ದೃಢಪಡಿಸಿದ್ದರೂ, ಇದನ್ನು ಅಧಿಕೃತವಾಗಿ ಘೋಷಿಸಲಾಗಿಲ್ಲ. ಸಂಘಟಕರು ಕೇಂದ್ರ ಸರಕಾರದಿಂದ ಅನುಮೋದನೆಗಾಗಿ ಕಾಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News