ಕೋವಿಡ್ ಆಸ್ಪತ್ರೆಗಳಿಗೆ ಅಲೋಕ್ ಕುಮಾರ್ ಭೇಟಿ
Update: 2020-07-27 12:11 GMT
ಬೆಂಗಳೂರು, ಜು.27: ಕೊರೋನ ಸೋಂಕಿತರಿಂದ ಖಾಸಗಿ ಆಸ್ಪತ್ರೆಗಳು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ದಿನೇ ದಿನೇ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಪೊಲೀಸ್ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಅವರು ಇಲ್ಲಿನ ಮಣಿಪಾಲ್, ಸಿಎಂಹೆಚ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದರು.
ಆಸ್ಪತ್ರೆಯಲ್ಲಿ ಸೋಂಕಿತರಿಗೆ ಎಷ್ಟು ಹಾಸಿಗೆಗಳನ್ನು ಮೀಸಲಿಡಲಾಗಿದೆ. ಕೋವಿಡ್ ರೋಗಿಗಳ ಸಂಖ್ಯೆ, ಚಿಕಿತ್ಸಾ ವೆಚ್ಚ ಕುರಿತು ಪರಿಶೀಲನೆ ನಡೆಸಿದರು.