ಸಂಸತ್ ಭವನಕ್ಕೆ ಸುರಕ್ಷಾ ಸಮಸ್ಯೆ: ಕೇಂದ್ರ ಸರ್ಕಾರ

Update: 2020-07-29 04:22 GMT

ಹೊಸದಿಲ್ಲಿ, ಜು.29: ನೂರು ವರ್ಷ ಹಳೆಯ ಸಂಸತ್ ಭವನ ಗಂಭೀರ ಬೆಂಕಿ ಅನಾಹುತ ಸೇರಿದಂತೆ ಹಲವು ಸುರಕ್ಷಾ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದರಿಂದಾಗಿ ದ್ವಿಸದನಕ್ಕೆ ಸ್ಥಳಾವಕಾಶವಾಗುವಂತೆ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್‌ನಡಿ ಅತ್ಯಾಧುನಿಕ ಕಟ್ಟಡ ನಿರ್ಮಿಸುವುದು ಅಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದೆ.

ಸಂಸತ್ ಭವನದ ನಿರ್ಮಾಣ ಕಾರ್ಯ 1921ರಲ್ಲಿ ಆರಂಭವಾಗಿ 1937ರಲ್ಲಿ ಪೂರ್ಣಗೊಂಡಿದೆ. ಇದು 100 ವರ್ಷ ಹಳೆಯದು. ಕಳೆದ ವರ್ಷಗಳಲ್ಲಿ ಸಂಸದೀಯ ಚಟುವಟಿಕೆಗಳು ಹಲವು ಪಟ್ಟು ಹೆಚ್ಚಿವೆ. ಆದ್ದರಿಂದ ಸ್ಥಳಾವಕಾಶ, ಸೌಲಭ್ಯಗಳು ಮತ್ತು ತಂತ್ರಜ್ಞಾನ ಅಗತ್ಯತೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದೆ.

ಸಂಸತ್ ಭವನವನ್ನು ಇಂಪೀರಿಯಲ್ ಶಾಸನ ಮಂಡಳಿಯ ಸದನವಾಗಿ ವಿನ್ಯಾಸಗೊಳಿಸಲಾಗಿದ್ದು, ಲೋಕಸಭೆ ಹಾಗೂ ರಾಜ್ಯಸಭೆಯ ಸದನವಾಗಿ ವಿನ್ಯಾಸಗೊಳಿಸಿಲ್ಲ. 1956ರಲ್ಲಿ ಎರಡು ಅಂತಸ್ತು ಸೇರಿಸಲಾಗಿದೆ. ಇಂದಿನ ಬೆಂಕಿ ಅವಘಡ ನಿಯಮಾವಳಿಗೆ ಅನುಗುಣವಾಗಿ ಈ ಕಟ್ಟಡ ನಿರ್ಮಿಸಲಾಗಿಲ್ಲ. ಆದ್ದರಿಂದ ಅಗ್ನಿ ಸುರಕ್ಷತೆ ಕಳವಳಕಾರಿ ಅಂಶವಾಗಿದೆ ಎಂದು ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಪ್ರತಿಯಾಗಿ ಅಫಿಡವಿಟ್ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News