ಅಶೋಕ್ ಗೆಹ್ಲೋಟ್ ಬೆಂಬಲಿಗ ಶಾಸಕರು ಜೈಸಲ್ಮೇರ್‌ಗೆ ಶಿಫ್ಟ್

Update: 2020-07-31 09:40 GMT

ಜೈಪುರ, ಜು.31: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವ ಕಾರಣ ಜೈಪುರ-ದಿಲ್ಲಿಯ ಹೆದ್ದಾರಿ ಸಮೀಪದ ಹೊಟೇಲ್‌ನಲ್ಲಿ ತಂಗಿದ್ದ ಅಶೋಕ್ ಗೆಹ್ಲೋಟ್ ಬಣದ ಶಾಸಕರು ಶುಕ್ರವಾರ ಜೈಸಲ್ಮೇರ್‌ಗೆ ಶಿಫ್ಟ್ ಆಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಹೊಟೇಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆದ ಬಳಿಕ ಶಾಸಕರುಗಳನ್ನು ಜೈಸಲ್ಮೇರ್‌ಗೆ ಸ್ಥಳಾಂತರಿಸಲಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶಾಸಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ರಾಜ್ಯ ಸರಕಾರದ ವಿರುದ್ಧ ಸಚಿನ್ ಪೈಲಟ್ ಹಾಗೂ ಇತರ 18 ಶಾಸಕರು ಬಂಡಾಯದ ಬಾವುಟ ಹಾರಿಸಿದ ಬಳಿಕ ಜುಲೈ 13ರಿಂದ ಕಾಂಗ್ರೆಸ್‌ನ ಉಳಿದ ಶಾಸಕರು ಹೊಟೇಲ್‌ನಲ್ಲೇ ಬೀಡು ಬಿಟ್ಟಿದ್ದಾರೆ.

ಇನ್ನು 15 ದಿನಗಳಲ್ಲಿ ನಡೆಯಲಿರುವ ವಿಧಾನಸಭೆಯ ಅಧಿವೇಶನದಲ್ಲಿ ವಿಶ್ವಾಸಮತ ಯಾಚಿಸುತ್ತೇನೆ ಎಂದು ಮುಖ್ಯಮಂತ್ರಿ ಗೆಹ್ಲೋಟ್ ಗುರುವಾರ ಸುಳಿವು ನೀಡಿದ್ದಾರೆ. ಶಾಸಕರಿಗೆ ಪಕ್ಷಾಂತರ ಮಾಡಲು ಹಣದ ಆಮಿಷ ಒಡ್ಡಲಾಗುತ್ತಿದ್ದು, ಅಧಿವೇಶನಕ್ಕಿಂತ ಮೊದಲು ಹಣದ ಕೊಡುಗೆಯು ಭಾರೀ ಏರಿಕೆಯಾಗಲಿದೆ. ಹಣ ಪಡೆಯದ ಬಂಡಾಯ ಶಾಸಕರು ಪಕ್ಷಕ್ಕೆ ವಾಪಸ್ ಬರಬೇಕೆಂದು ಎಂದು ಗೆಹ್ಲೋಟ್ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News