ಕ್ಯಾಲಿಫೋರ್ನಿಯದಲ್ಲಿ ಕಾಡ್ಗಿಚ್ಚು: 4500 ಎಕರೆ ಪ್ರದೇಶ ಬೆಂಕಿಗೆ ಆಹುತಿ

Update: 2020-08-02 15:31 GMT

ವಾಶಿಂಗ್ಟನ್,ಆ.2: ಕೊರೋನ ವೈರಸ್ ಸಾಂಕ್ರಾಮಿಕದ ಆರ್ಭಟದಿಂದ ತತ್ತರಿಸಿರುವ ಅಮೆರಿಕಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಕಾಡ್ಗಿಚ್ಚಿನ ಹಾವಳಿ ಎದುರಾಗಿದೆ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಕಾಣಿಸಿಕೊಂಡಿರುವ ಭೀಕರ ಕಾಡ್ಗಿಚ್ಚು 4 ಸಾವಿರ ಎಕರೆಗೂ ಅಧಿಕ ವಿಸ್ತೀರ್ಣಕ್ಕೆ ಹರಡಿದ್ದು, ರಿವರ್‌ಸೈಡ್ ಕೌಂಟಿ ಪಟ್ಟಣದ 8 ಸಾವಿರಕ್ಕೂ ಅಧಿಕ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ.

ಆ್ಯಪಲ್ ಫೈರ್ ಎಂಬುದಾಗಿ ಸ್ಥಳೀಯ ಅಗ್ನಿಶಾಮಕದಳವು ಹೆಸರಿಟ್ಟಿರುವ ಈ ಕಾಡ್ಗಚ್ಚು ಶುಕ್ರವಾರ ಚೆರ್ರಿ ವ್ಯಾಲಿ ಪ್ರದೇಶದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು.ಪರ್ವತಾವೃತ ಪ್ರಾಂತವಾದ ರಿವರ್‌ಸೈಡ್ ಕೌಂಟಿಯಲ್ಲಿ ಕಾಡ್ಗಿಚ್ಚಿನ ದಟ್ಚವಾದ ಹೊಗೆಯು ಆಕಾಶದೆತ್ತರಕ್ಕೆ ವ್ಯಾಪಿಸಿರುವ ದೃಶ್ಯವನ್ನು ಸ್ಥಳೀಯ ಅಗ್ನಿಶಾಮಕ ದಳವು ಟ್ವೀಟ್ ಮಾಡಿದೆ.

ರಿವರ್‌ಸೈಡ್ ಕೌಂಟಿಯ 2586 ಮನೆಗಳ 8 ಸಾವಿರ ನಿವಾಸಿಗಳನ್ನು ಸ್ಥಳದಿಂದ ತೆರವುಗೊಳಿಸುವಂತೆ ಇಲಾಖೆಯು ಸೂಚಿಸಿದೆಯೆಂದು ಅಗ್ನಿಶಾಮಕ ದಳವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News