ಕೊರೋನ ಭೀತಿ: ನೋಟುಗಳನ್ನು ವಾಷಿಂಗ್ ಮೆಷಿನ್ ನಲ್ಲಿ ತೊಳೆದು ಹಣ ಕಳೆದುಕೊಂಡ !

Update: 2020-08-02 15:44 GMT
ಸಾಂದರ್ಭಿಕ ಚಿತ್ರ

ಸಿಯೋಲ್: ನೋವೆಲ್ ಕೊರೋನ ವೈರಸ್ ಭೀತಿಯಿಂದ ನೋಟನ್ನು ವಾಷಿಂಗ್ ಮಿಷನ್ನಲ್ಲಿ ಹಾಕಿ ತೊಳೆಯಲು ಮುಂದಾದ ದಕ್ಷಿಣ ಕೊರಿಯಾ ಪ್ರಜೆಯೊಬ್ಬ ಹಣವನ್ನು ಕಳೆದುಕೊಂಡ ಘಟನೆ ವರದಿಯಾಗಿದೆ.

ಸುಮಾರು 50 ಸಾವಿರ ವೋನ್ (42 ಸಾವಿರ ಡಾಲರ್) ಮೌಲ್ಯದ ನೋಟುಗಳನ್ನು ವಾಷಿಂಗ್ ಮಿಷನ್ನಲ್ಲಿ ಹಾಕಿ ತೊಳೆಯಲು ಸಿಯೋಲ್ ನಗರದ ಬಳಿಯ ನಿವಾಸಿಯೊಬ್ಬ ಪ್ರಯತ್ನಿಸಿದ್ದ. ಬಹುತೇಕ ನೋಟುಗಳು ಹಾಳಾಗಿದ್ದು, ಹಾಳಾದ ನೋಟುಗಳನ್ನು ಬ್ಯಾಂಕ್ ಆಫ್ ಕೊರಿಯಾಗೆ ಒಯ್ದು, ಇದನ್ನು ಹೊಸ ನೋಟುಗಳಿಗೆ ಬದಲಾಯಿಸಬಹುದೇ ಎಂದು ಕೇಳಿದ್ದಾನೆ.

ಚಿಂದಿಯಾದ ನೋಟುಗಳನ್ನು ವ್ಯಕ್ತಿಯಿಂದ ಪಡೆದು 19320 ಡಾಲರ್ ಹಣವನ್ನು ಮರಳಿಸಲಾಗಿದೆ ಎಂದು ಬ್ಯಾಂಕ್ ಆಫ್ ಕೊರಿಯಾ ಪ್ರಕಟಣೆಯಲ್ಲಿ ಹೇಳಿದೆ.

50 ಸಾವಿರ ವೋನ್ ನೋಟುಗಳನ್ನು ಅರ್ಧಬೆಲೆಗೆ ವಿನಿಮಯ ಮಾಡಲಾಗಿದೆ. ಬಹಳಷ್ಟು ನೋಟುಗಳಿಗೆ ತೀವ್ರ ಹಾನಿಯಾಗಿದ್ದರಿಂದ ಅದನ್ನು ವಿನಿಮಯ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಎಣಿಕೆ ಮಾಡಿಲ್ಲ ಎಂದು ಬ್ಯಾಂಕ್ ಅಧಿಕಾರಿ ಸಿಯೊ ಜೀ ವೋನ್ ಹೇಳಿದ್ದಾರೆ. ಆ ವ್ಯಕ್ತಿ ಎಷ್ಟು ಮೊತ್ತದ ಹಣವನ್ನು ತೊಳೆಯಲು ಮುಂದಾಗಿದ್ದ ಎನ್ನುವುದು ನಿಖರವಾಗಿ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News