ಸ್ಪೇಸ್‌ಎಕ್ಸ್ ನಿರ್ಮಿತ ಬಾಹ್ಯಾಕಾಶ ನೌಕೆ ಭೂಮಿಯತ್ತ ಪಯಣ: ಇಬ್ಬರು ಗಗನಯಾತ್ರಿಗಳಿರುವ ಬಾಹ್ಯಾಕಾಶ ನೌಕೆ

Update: 2020-08-02 16:48 GMT

ನ್ಯೂಯಾರ್ಕ್,ಆ.2: ಅಮೆರಿಕದ ಗಗನಯಾತ್ರಿಗಳಾದ ಡ್ಯೂಗ್ ಹುರ್ಲೆ ಹಾಗೂ ಬಾಬ್ ಬೆಹ್ನೆಕಿನ್ ಅವರನ್ನು ಹೊತ್ತ ಡ್ರಾಗನ್ ಎಂಡೆವರ್ ಕ್ಯಾಪ್ಸೂಲ್ ಬಾಹ್ಯಾಕಾಶ ನೌಕೆಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸಿದ್ದು, ಭೂಮಿಯೆಡೆಗೆ ಪ್ರಯಾಣವನ್ನು ಆರಂಭಿಸಿದೆ.

 ಡ್ರಾಗನ್ ಎಂಡೆವರ್ 2011ರ ಬಳಿಕ ಅಮೆರಿಕದ ನೆಲದಿಂದ ಉಡಾವಣೆಗೊಂಡ ಪ್ರಪ್ರಥಮ ಬಾಹ್ಯಾಕಾಶ ನೌಕೆಯಾಗಿದೆ. ಅಷ್ಟೇ ಅಲ್ಲದೆ ಮಾನವರನ್ನು ಅಂತರಿಕ್ಷಕ್ಕೆ ಕೊಂಡೊಯ್ಯಲು ವಾಣಿಜ್ಯಾತ್ಮಕವಾಗಿ ಅಭಿವೃದ್ಧಿಪಡಿಸಿದ ಮೊದಲ ಗಗನನೌಕೆ ಇದಾಗಿದೆ.

ಈ ಇಬ್ಬರು ಬಾಹ್ಯಾಕಾಶ ಯಾತ್ರಿಕರು ರವಿವಾರ ಭೂಕಾಲಮಾನ 4.45ರ ವೇಳೆಗೆ ಕರಾವಳಿಯಲ್ಲಿ ಇಳಿಯಲಿದ್ದಾರೆಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ತಿಳಿಸಿದೆ. ಡ್ರಾಗನ್ ಎಂಡೆವರ್ ನೌಕೆಯನ್ನು ಅಮೆರಿಕದ ವಾಣಿಜ್ಯ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಎಕ್ಸ್ ಅಭಿವೃದ್ಧಿಪಡಿಸಿದೆ.

ಈ ಇಬ್ಬರು ಗಗನಯಾತ್ರಿಕರ ಯಶಸ್ವಿ ಆಗಮನದೊಂದಿಗೆ ಅಮೆರಿಕವು ಮಾನವ ಬಾಹ್ಯಾಕಾಶ ಯಾತ್ರೆಯಲ್ಲಿ ಮತ್ತೆ ವಿಶ್ವನಾಯಕನೆನಿಸಿಕೊಳ್ಳಲಿದೆ.

 ಗಗನಯಾತ್ರಿಗಳಾದ ಬೆಹನ್‌ಕೆನ್ ಹಾಗೂ ಹುರ್ಲೆ ಅವರು ತಮ್ಮ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ಕ್ಕೆ ತಮ್ಮ ಯಾತ್ರೆಯನ್ನು ಮೇನಲ್ಲಿ ಆರಂಭಿಸಿದ್ದರು. ಸುಮಾರು ಎರಡು ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ್ತವ್ಯವಿದ್ದ ಬಳಿಕ ಅವರು ಭೂಮಿಗೆ ಮರಳುತ್ತಿದ್ದಾರೆ. ಈ ಮಧ್ಯೆ ಗಗನಯಾತ್ರಿಗಳು ಇಳಿಯಲಿರುವ ಫ್ಲಾರಿಡಾದ ಕರಾವಳಿಯಲ್ಲಿ ಚಂಡಮಾರುತದ ಭೀತಿಯಿರುವುದು ಆತಂಕಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News