ಐಪಿಎಲ್: ಚೀನಾದ ಪ್ರಾಯೋಜಕತ್ವ ಮುಂದುವರಿಕೆಗೆ ಉಮರ್ ಅಬ್ದುಲ್ಲಾ ಟೀಕೆ

Update: 2020-08-03 05:47 GMT

ಶ್ರೀನಗರ, ಆ.3: "ಲಡಾಖ್‌ನಲ್ಲಿ ನಮ್ಮ ಸೈನಿಕರನ್ನು ಹತ್ಯೆಗೈದಿರುವ ಚೀನಾ ದೇಶದ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಜನರಿಗೆ ಕರೆ ನೀಡುವವರು ಮತ್ತೊಂದೆಡೆ ಐಪಿಎಲ್ ಕ್ರಿಕೆಟ್ ಟೂರ್ನಮೆಂಟ್‌ಗೆ ಚೀನಾದ ಕಂಪೆನಿಗಳ ಪ್ರಾಯೋಜಕತ್ವವನ್ನು ಉಳಿಸಿಕೊಳ್ಳಲು ಅವಕಾಶ ನೀಡಿದ್ದಾರೆ'' ಎಂದು ರಾಷ್ಟ್ರೀಯ ಕಾನ್ಫರೆನ್ಸ್(ಎನ್‌ಸಿ)ಮುಖಂಡ ಉಮರ್ ಅಬ್ದುಲ್ಲಾ ರವಿವಾರ  ಇಬ್ಬಗೆ ನೀತಿಯನ್ನು ಬೊಟ್ಟು ಮಾಡಿದ್ದಾರೆ.

  "ಚೀನಾದ ಮೊಬೈಲ್ ಉತ್ಪಾದಕರನ್ನ್ನು ಐಪಿಎಲ್ ಶೀರ್ಷಿಕೆ ಪ್ರಾಯೋಜಕರನ್ನಾಗಿ ಮುಂದುವರಿಸಲಾಗಿದೆ. ಮತ್ತೊಂದೆಡೆ ಜನತೆಗೆ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದು ಕರೆ ನೀಡಲಾಗುತ್ತದೆ. ಚೀನಾದ ಹಣ,ಹೂಡಿಕೆ, ಪ್ರಾಯೋಜಕತ್ವ ಹಾಗೂ ಜಾಹೀರಾತನ್ನು ಹೇಗೆ ನಿಭಾಯಿಸಬೇಕೇಂಬ ಕುರಿತು ನಾವು ಇಷ್ಟೊಂದು ಗೊಂದಲಕ್ಕೀಡಾದಾಗ ಚೀನಾ ನಮ್ಮವಿಚಾರಕ್ಕೆ ಮೂಗು ತೂರಿಸುವುದರಲ್ಲಿ ಆಶ್ಚರ್ಯವೇನಿಲ್ಲ''ಎಂದು ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ರವಿವಾರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಆಡಳಿತ ಮಂಡಳಿಯು ಯುಎಇನಲ್ಲಿ ಸೆ.19ರಿಂದ ನವೆಂಬರ್ 10ರ ತನಕ ನಡೆಯಲಿರುವ 13ನೆ ಆವೃತ್ತಿಯ ಐಪಿಎಲ್‌ನಲ್ಲಿ ಚೀನಾದ ಮೊಬೈಲ್ ಕಂಪೆನಿ ವಿವೋ ಸಹಿತ ಎಲ್ಲ ಪ್ರಾಯೋಜಕರನ್ನು ಉಳಿಸಿಕೊಳ್ಳಲು ನಿರ್ಧರಿಸಿದ ಸುದ್ದಿ ಬಂದ ಹಿನ್ನೆಲೆಯಲ್ಲಿ ಅಬ್ದುಲ್ಲಾ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News