ಗೃಹ ಸಚಿವ ಅಮಿತ್ ಶಾ ಏಮ್ಸ್ ಬದಲು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೇಕೆ: ಶಶಿ ತರೂರ್ ಪ್ರಶ್ನೆ

Update: 2020-08-03 09:30 GMT

ಹೊಸದಿಲ್ಲಿ, ಆ.3: ರವಿವಾರ ಕೊರೋನ ವೈರಸ್ ಸೋಂಕಿಗೆ ಒಳಗಾಗಿರುವ ಗೃಹ ಸಚಿವ ಅಮಿತ್ ಶಾ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದನ್ನು ಇಂದು ಪ್ರಶ್ನಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, "ಸಾರ್ವಜನಿಕ ಸಂಸ್ಥೆಗಳಿಗೆ ಸಾರ್ವಜನಿಕರ ವಿಶ್ವಾಸವನ್ನು ಪ್ರೇರೇಪಿಸಬೇಕಾದರೆ ಪ್ರಬಲರ ಪ್ರೋತ್ಸಾಹ ಬೇಕು'' ಎಂದು ಟ್ವೀಟ್ ಮಾಡಿದ್ದಾರೆ.

ಕೊರೋನ ಸೋಂಕು ದೃಢಪಟ್ಟ ಬಳಿಕ 55ರ ವಯಸ್ಸಿನ ಶಾ ಚಿಕಿತ್ಸೆಗಾಗಿ ಹರ್ಯಾಣದ ಗುರುಗಾಂವ್‌ನಲ್ಲಿರುವ ಮೆದಾಂತ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನನ್ನ ಆರೋಗ್ಯ ಚೆನ್ನಾಗಿದೆ. ಆದರೆ, ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ನನ್ನ ಸಂಪರ್ಕದಲ್ಲಿದ್ದವರು ದಯವಿಟ್ಟು ಪ್ರತ್ಯೇಕತೆ ಕಾಯ್ದುಕೊಂಡು, ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಶಾ ರವಿವಾರ ಟ್ವೀಟ್ ಮಾಡಿದ್ದರು.

ದಿಲ್ಲಿಯ ಪ್ರತಿಷ್ಠಿತ ಅಖಿಲ ಭಾರತ ವೈದ್ಯಕೀಯ ಸಂಸ್ಥೆ(ಏಮ್ಸ್)ಯ ಟ್ವೀಟ್‌ಗೆ ಶಶಿ ತರೂರ್‌ಪ್ರತಿಕ್ರಿಯಿಸಿದರು. ಏಮ್ಸ್‌ನ್ನು 1956ರಲ್ಲಿ ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದಾಗ ಸ್ಥಾಪಿಸಿದ್ದರು.

 "ನಮ್ಮ ಗೃಹ ಸಚಿವರು ಅನಾರೋಗ್ಯ ಕಾಡಿದಾಗ ಏಮ್ಸ್‌ಗೆ ತೆರಳದೆ ನೆರೆಯ ರಾಜ್ಯದ ಖಾಸಗಿ ಆಸ್ಪತ್ರೆಯನ್ನು ಏಕೆ ಆಯ್ಕೆ ಮಾಡಿಕೊಂಡರು ಎನ್ನುವುದು ಆಶ್ಚರ್ಯದ ವಿಚಾರವಾಗಿದೆ. ಸಾರ್ವಜನಿಕ ಸಂಸ್ಥೆಗಳ ಮೇಲೆ ಜನತೆಯ ಆತ್ಮವಿಶ್ವಾಸವನ್ನು ಪ್ರೇರೇಪಿಸಲು ಪ್ರಭಾವಿಗಳ ಪ್ರೋತ್ಸಾಹ, ರಕ್ಷಣೆ ಅಗತ್ಯವಿದೆ'' ಎಂದು ತರೂರ್‌ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News