ಈದ್ ಗಾಗಿ ಮನೆಗೆ ತೆರಳಿದ್ದ ಯೋಧ ನಾಪತ್ತೆ: ಭಯೋತ್ಪಾದಕರು ಅಪಹರಿಸಿರುವ ಶಂಕೆ

Update: 2020-08-03 14:53 GMT

ಹೊಸದಿಲ್ಲಿ, ಆ. 4: ಈದುಲ್ ಅಝ್ ಹಾಗೆ ಜಮ್ಮು ಹಾಗೂ ಕಾಶ್ಮೀರಕ್ಕೆ ತೆರಳಿದ್ದ ಯೋಧರೋರ್ವರು ರವಿವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ ಎಂದು ಸೇನೆ ತಿಳಿಸಿದೆ.

162 ಬೆಟಾಲಿಯನ್‌ನ ಭಾಗವಾಗಿದ್ದ ರೈಫಲ್ ಮ್ಯಾನ್ ಶಾಕಿರ್ ಮಂಝೂರ್ ರಜೆಯ ಮೇಲೆ ತನ್ನ ತಾಯ್ನಾಡಾದ ಶೋಪಿಯಾನಕ್ಕೆ ತೆರಳಿದ್ದರು. ಅವರನ್ನು ಭಯೋತ್ಪಾದಕರು ಅಪಹರಿಸಿರುವ ಸಾಧ್ಯತೆ ಇದೆ ಎಂದು ಸೇನೆ ತಿಳಿಸಿದೆ.

ಟೆರರ್ರಿಸಂ ಫ್ರೀ ಕರ್ನಾಟಕ ಹ್ಯಾಷ್‌ಟ್ಯಾಗ್‌ನ ಅಡಿಯಲ್ಲಿ ಟ್ವೀಟ್ ಮಾಡಿರುವ ಸೇನೆ, ‘‘162 ಬೆಟಾಲಿಯನ್ (ಟಿಎ) ರೈಫಲ್ ಮ್ಯಾನ್ ಶಾಕಿರ್ ಮಂಝೂರ್ ರವಿವಾರ ಸಂಜೆ 5 ಗಂಟೆಯಿಂದ ನಾಪತ್ತೆಯಾಗಿದ್ದಾರೆ. ಅವರ ಪರಿತ್ಯಕ್ತ ಕಾರು ಕುಲ್ಗಾಂವ್ ಸಮೀಪ ಅರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರನ್ನು ಭಯೋತ್ಪಾದಕರು ಅಪಹರಿಸಿರುವ ಸಾಧ್ಯತೆ ಇದೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ’’ ಎಂದು ಹೇಳಿದೆ.

  ಮಂಝರ್ ಅವರಿಗೆ ಸೇರಿದ ಕಾರು ಅರೆ ಸುಟ್ಟ ಸ್ಥಿತಿಯಲ್ಲಿ ಕುಲ್ಗಾಂವ್ ಜಿಲ್ಲೆಯ ಸಮೀಪದ ರಾಂಭಾನ್ ಪ್ರದೇಶದಲ್ಲಿ ಪತ್ತೆಯಾಗಿದೆ. ಶೋಫಿಯಾನ, ಕುಲ್ಗಾಂವ್ ಹಾಗ ಅನಂತ್‌ನಾಗ್ ಜಿಲ್ಲೆಗಳಾದ್ಯಂತ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಶೋಧ ಕಾರ್ಯಾಚರಣೆಗೆ ಡ್ರೋನ್‌ಗಳು ಹಾಗೂ ಸ್ನಿಫ್ಫರ್ ನಾಯಿಗಳನ್ನು ಬಳಸಲಾಗುತ್ತಿದೆ ಎಂದು ಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News