ಪಿರಮಿಡ್‌ಗಳನ್ನು ಕಟ್ಟಿದ್ದು ಅನ್ಯಗ್ರಹವಾಸಿಗಳು: ಎಲಾನ್ ಮಸ್ಕ್

Update: 2020-08-03 17:52 GMT

ಕೈರೋ (ಈಜಿಪ್ಟ್), ಆ. 3: ಈಜಿಪ್ಟ್‌ನ ಜಗತ್ಪ್ರಸಿದ್ಧ ಪಿರಮಿಡ್‌ಗಳನ್ನು ನಿರ್ಮಿಸಿದ್ದು ಅನ್ಯಗ್ರಹವಾಸಿಗಳು ಎಂಬ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಕಂಪೆನಿಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಲಾನ್ ಮಸ್ಕ್ ರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಈಜಿಪ್ಟ್, ಅದು ಯಾರು ಕಟ್ಟಿರುವುದು ಎನ್ನುವುದನ್ನು ಬಂದು ನೀವೇ ನೋಡಿ ಎಂಬ ಆಹ್ವಾನವನ್ನು ನೀಡಿದೆ.

ಈಜಿಪ್ಟ್‌ನ ಪಿರಮಿಡ್‌ಗಳನ್ನು ಕಟ್ಟಿದ್ದು ಅನ್ಯಗ್ರಹ ಜೀವಿಗಳು ಎಂಬ ಸಿದ್ಧಾಂತವನ್ನು ಸಮರ್ಥಿಸುವ ರೀತಿಯಲ್ಲಿ ಇತ್ತೀಚೆಗೆ ಬಿಲಿಯಾಧೀಶ ಮಸ್ಕ್ ಟ್ವೀಟ್ ಮಾಡಿದ್ದರು.

‘‘ಪಿರಮಿಡ್‌ಗಳನ್ನು ಕಟ್ಟಿದ್ದು ಅನ್ರಗ್ರಹವಾಸಿಗಳು ಎನ್ನುವುದು ಸ್ಪಷ್ಟ’’ ಎಂದು ಅವರು ತನ್ನ ಟ್ವೀಟ್‌ನಲ್ಲಿ ಹೇಳಿದ್ದರು. ಆದರೆ, ಅದನ್ನು ಅವರು ತಮಾಷೆಗಾಗಿ ಹೇಳಿದ್ದಾರೆಯೇ ಅಥವಾ ಗಂಭೀರವಾಗಿ ಹೇಳಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

‘‘ನಾನು ನಿಮ್ಮ ಸಾಧನೆಯನ್ನು ಗೌರವದಿಂದ ಕಾಣುವವನಾಗಿದ್ದೇನೆ. ಪಿರಮಿಡ್‌ಗಳನ್ನು ಹೇಗೆ ಕಟ್ಟಲಾಗಿದೆ ಎನ್ನುವುದನ್ನು ಪರಿಶೀಲಿಸಲು ನಾನು ನಿಮಗೆ ಮತ್ತು ಸ್ಪೇಸ್‌ಎಕ್ಸ್‌ಗೆ ಆಹ್ವಾನ ನೀಡುತ್ತಿದ್ದೇನೆ. ಮಸ್ಕ್ ಅವರೇ, ನಾವು ನಿಮಗಾಗಿ ಕಾಯುತ್ತಿದ್ದೇವೆ’’ ಎಂದು ಈಜಿಪ್ಟ್‌ನ ಅಂತರ್‌ರಾಷ್ಟ್ರೀಯ ಸಹಕಾರ ಸಚಿವೆ ರನಿಯಾ ಅಲ್ ಮಶತ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News