ತನ್ನ ಗೆಳತಿಯನ್ನು ರಕ್ಷಿಸಿ ನದಿಗೆ ಬಿದ್ದು ಕೊನೆಯುಸಿರೆಳೆದ 13 ವರ್ಷದ ಬಾಲಕಿ

Update: 2020-08-03 17:56 GMT

ಮೇಘಾಲಯ: ಜಲಪಾತವೊಂದಕ್ಕೆ ಬೀಳುತ್ತಿದ್ದ ತನ್ನ ಸ್ನೇಹಿತೆಯೊಬ್ಬಳು ಬೀಳುವುದನ್ನು ತಡೆದ 13 ವರ್ಷದ ಬಾಲಕಿಯೊಬ್ಬಳು ನದಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮೇಘಾಲಯದಲ್ಲಿ ನಡೆದಿದೆ.

ರೋಂಗ್ ಕುಚೋಂಗ್ ಸಮೀಪದ ಜಲಪಾತವನ್ನು ವೀಕ್ಷಿಸಲು ಬಾಲಕಿ ಮತ್ತು ಆಕೆಯ ಮೂವರು ಸ್ನೇಹಿತೆಯರು ತೆರಳಿದ್ದರು. ಜಲಪಾತದ ಸಮೀಪ ನಿಂತಿದ್ದ ತನ್ನ ಸ್ನೇಹಿತೆ ನಿಯಂತ್ರಣ ತಪ್ಪಿ ಜಲಪಾತಕ್ಕೆ ಬೀಳಲಿದ್ದಾಗ ಧಾವಿಸಿ ಬಂದ 13 ವರ್ಷದ ಬಾಲಕಿ ಮಿಮಾ ಪತಿಯಾಸಾ ಆಕೆಯನ್ನು ರಕ್ಷಿಸಿದ್ದಾಳೆ. ಆದರೆ ಈ ಪ್ರಯತ್ನದಲ್ಲಿ ನದಿಗೆ ಬಿದ್ದಿದ್ದಾಳೆ.

“ನದಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ ಮತ್ತು ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಪೋಷಕರಿಗೆ ಹಸ್ತಾಂತರಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News