ಜಮ್ಮು-ಕಾಶ್ಮೀರ: ಜಮೀನು ಅತಿಕ್ರಮಣ ದೂರು; ವಿವಿಧೆಡೆ ಸಿಬಿಐ ಶೋಧ ಕಾರ್ಯಾಚರಣೆ

Update: 2020-08-04 17:40 GMT

ಶ್ರೀನಗರ, ಆ.4: ಜಮ್ಮು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಸರಕಾರದ ಜಮೀನಿನ ವ್ಯಾಪಕ ಅತಿಕ್ರಮಣ ದೂರಿಗೆ ಸಂಬಂಧಿಸಿ ಸಿಬಿಐ ಜಮ್ಮು, ಉಧಂಪುರ, ಕಥುವಾ ಜಿಲ್ಲೆಯ ವಿವಿಧೆಡೆ ಮಂಗಳವಾರ ಶೋಧ ಕಾರ್ಯಾಚರಣೆ ನಡೆಸಿರುವುದಾಗಿ ವರದಿಯಾಗಿದೆ.

ಉಧಂಪುರ ಜಿಲ್ಲೆಯ ಆಕರ್ಷಣೀಯ ಪ್ರವಾಸೀ ತಾಣವಾಗಿರುವ ಪಟ್ನಿಟಾಪ್ ಪ್ರದೇಶದಲ್ಲಿ ಸರಕಾರದ ಜಮೀನನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿದೆ. ಕನಿಷ್ಟ 59 ಹೋಟೆಲ್ ಮತ್ತು ರೆಸಾರ್ಟ್‌ಗಳು ಸರಕಾರಿ ಜಮೀನನ್ನು ಅತಿಕ್ರಮಿಸಿದೆ ಎಂಬ ದೂರಿನ ಬಗ್ಗೆ ಜಮ್ಮು ಕಾಶ್ಮೀರ ಹೈಕೋರ್ಟ್‌ನ ನಿರ್ದೇಶನದಂತೆ ಸಿಬಿಐ ಪ್ರಾಥಮಿಕ ವಿಚಾರಣೆ ನಡೆಸಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಪಟ್ನಿಟಾಪ್ ಪ್ರದೇಶದಲ್ಲಿ 70%ದಷ್ಟು ಹೋಟೆಲ್ ಹಾಗೂ ರೆಸ್ಟಾರೆಂಟ್‌ಗಳನ್ನು ನಿಯಮ ಮೀರಿ ನಿರ್ಮಿಸಲಾಗಿದೆ ಎಂದು ಹೋಟೆಲ್ ಮತ್ತು ರೆಸ್ಟಾರೆಂಟ್ ಅಸೋಸಿಯೇಷನ್‌ನ ಅಧ್ಯಕ್ಷರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News