ಮುಂಬೈನ ಕೊಲಬಾ ಪ್ರದೇಶದಲ್ಲಿ 46 ವರ್ಷಗಳ ಬಳಿಕ ಭಾರೀ ಮಳೆ

Update: 2020-08-06 06:22 GMT

ಮುಂಬೈ, ಆ.6: ದಕ್ಷಿಣ ಮುಂಬೈನ ಕೊಲಬಾ ಪ್ರದೇಶದಲ್ಲಿ 46 ವರ್ಷಗಳ ಬಳಿಕ ಮೊದಲ ಬಾರಿ ಒಂದೇ ದಿನ ಭಾರೀ ಮಳೆ ಸುರಿದಿದೆ.

ಬುಧವಾರ ಗೇಟ್‌ವೇ ಆಫ್ ಇಂಡಿಯಾ ಸಹಿತ ಹಲವು ಪ್ರಮುಖ ಸ್ಥಳಗಳನ್ನು ಹೊಂದಿರುವ ಕೊಲಬಾ ಪ್ರದೇಶದಲ್ಲಿ ಭಾರೀ ಮಳೆ ಸುರಿದಿದ್ದು, 1974ರ ಬಳಿಕ ಆಗಸ್ಟ್ ತಿಂಗಳಲ್ಲಿ ಒಂದೇ ದಿನ ಭಾರೀ ಮಳೆಯಾಗಿದೆ. ಬುಧವಾರ ಬೆಳಗ್ಗೆ 8:30ರಿಂದ ಆರಂಭಿಸಿ 24 ಗಂಟೆಗಳ ಅವಧಿಯಲ್ಲಿ ಕೊಲಬಾ ಪ್ರದೇಶದಲ್ಲಿ 331.8 ಮಿ.ಮೀ.ಮಳೆ ದಾಖಲಾಗಿದೆ.

ಬುಧವಾರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ಹಾಗೂ ಚಂಡಮಾರುತದ ಗಾಳಿಯು ಗಂಟೆಗೆ 107 ಕಿ.ಮೀ. ವೇಗದಲ್ಲಿ ಬೀಸಿದೆ. ಇದರಿಂದಾಗಿ ಉಪನಗರ ರೈಲು ಹಾಗೂ ಬಸ್ ಸಂಚಾರ ವ್ಯತ್ಯಯವಾಗಿದೆ. ಸಾಮಾನ್ಯ ಜೀವನ ಅಸ್ತವ್ಯಸ್ತವಾಗಿತ್ತು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ಕಚೇರಿಗಳನ್ನು ಮುಚ್ಚಲಾಗಿತ್ತು. ಮುಂದಿನ ಕೆಲವು ಗಂಟೆಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಗತ್ಯವಿಲ್ಲದೆ ಮನೆಯಿಂದ ಹೊರಗೆ ಹೋಗಬೇಡಿ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಜನತೆಗೆ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News