200 ಅಮೆರಿಕನ್ನರಿಗೆ ವಂಚಿಸಿದ ಪ್ರಕರಣದಲ್ಲಿ ಭಾರತೀಯನಿಗೆ 1 ವರ್ಷ ಜೈಲು

Update: 2020-08-06 16:21 GMT

ವಾಶಿಂಗ್ಟನ್, ಆ. 6: ಸುಮಾರು 200 ಜನರಿಗೆ ಕನಿಷ್ಠ 1,50,000 ಡಾಲರ್ (ಸುಮಾರು 1.12 ಕೋಟಿ ರೂಪಾಯಿ) ವಂಚಿಸಿದ ಪ್ರಕರಣದಲ್ಲಿ ಅಮೆರಿಕದ ನ್ಯಾಯಾಲಯವೊಂದು ಭಾರತೀಯನೊಬ್ಬನಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದೆ.

29 ವರ್ಷದ ಅನಿಖ್‌ ಖಾನ್ ಯೂಸುಫ್‌ಖಾನ್ ಪಠಾಣ್ ಎಂಬಾತನು ವಿದ್ಯಾರ್ಥಿ ವೀಸಾದಲ್ಲಿ ಅಮೆರಿಕದಲ್ಲಿದ್ದಾಗ ಭಾರತದಲ್ಲಿರುವ ಹಲವರೊಂದಿಗೆ ಸೇರಿಕೊಂಡು ಅಮೆರಿಕದಾದ್ಯಂತದ ಸುಮಾರು 200 ಮಂದಿಗೆ ವಂಚಿಸಿದ್ದನು ಎಂದು ನ್ಯಾಯಾಲಯದ ದಾಖಲೆಗಳು ಹೇಳಿವೆ.

‘‘ಅನಿಖ್‌ಖಾನ್ ಯೂಸುಫ್‌ಖಾನ್ ಪಠಾಣ್ ಅಂತರ್‌ರಾಷ್ಟ್ರೀಯ ವಂಚನಾ ಜಾಲವೊಂದರ ಜೊತೆಗೆ ಸೇರಿಕೊಂಡು ಸುಮಾರು 200 ಕಠಿಣ ಪರಿಶ್ರಮಿ ಅಮೆರಿಕನ್ನರನ್ನು ಬಲಿಪಶು ಮಾಡಿದ್ದಾನೆ’’ ಎಂದು ವರ್ಜೀನಿಯ ಜಿಲ್ಲೆಯ ಅಟಾರ್ನಿ ಬುಧವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News