ಎನ್‌ಸಿಎಫ್ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯ ಉದ್ದೇಶ ಕಾರ್ಯಗತಗೊಳ್ಳಲಿದೆ: ಸಿಬಿಎಸ್‌ಇ

Update: 2020-08-07 17:30 GMT

ಹೊಸದಿಲ್ಲಿ, ಆ.7: ವಿವಿಧ ಪರಿಕಲ್ಪನೆಗಳನ್ನು ಒಂದುಗೂಡಿಸಲು ಸ್ವಾತಂತ್ರ ನೀಡಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ಮುಖ್ಯ ಉದ್ದೇಶವನ್ನು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (ಎನ್‌ಸಿಎಫ್) ಮೂಲಕ ಕಾರ್ಯಗತಗೊಳಿಸಲಾಗುವುದು ಎಂದು ಸಿಬಿಎಸ್‌ಇ ನಿರ್ದೇಶಕ ಬಿಸ್ವಜಿತ್ ಸಹಾ ಅವರು ಶುಕ್ರವಾರ ಇಲ್ಲಿ ತಿಳಿಸಿದರು.

ಪಿಎಚ್‌ಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ನೂತನ ಎನ್‌ಇಪಿ ಕುರಿತು ಏರ್ಪಡಿಸಿದ್ದ ಇ-ಸಮಾವೇಶದಲ್ಲಿ ಮಾತನಾಡಿದ ಸಹಾ,ನೂತನ ನೀತಿಯಲ್ಲಿ ಹೇಳಲಾಗಿರುವ ಸುಧಾರಣೆಗಳ ಜಾರಿಗಾಗಿ ಎನ್‌ಸಿಎಫ್ ಮಾರ್ಗಸೂಚಿಯನ್ನು ಒದಗಿಸಲಿದೆ ಎಂದರು.

ಸಾಮರ್ಥ್ಯ ಆಧಾರಿತ ಶಿಕ್ಷಣಕ್ಕೆ ಅಗತ್ಯವಿರುವ ತರಬೇತಿ ಮತ್ತು ಕಲಿಕೆಯ ಫಲಿತಾಂಶಗಳ ಬಗ್ಗೆ ಚರ್ಚೆಯೊಂದು ನಡೆಯಬಹುದಾಗಿದೆ,ಆದರೆ ಅದನ್ನು ಮಾಡಬೇಕೆಂದು ನಾವು ನಿರ್ಧರಿಸಿದೆವೆಂದರೆ ಪಾಲುದಾರರ ಪ್ರಗತಿಪರ ಪಾಲ್ಗೊಳ್ಳುವಿಕೆಯ ಮೂಲಕ ಅದನ್ನು ಸಾಧಿಸಬಹುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News