ಸೇನೆಗೆ ಮಹಿಳಾ ಯೋಧರ ನೇಮಕಾತಿ ಪ್ರಕ್ರಿಯೆ ಆರಂಭ

Update: 2020-08-07 19:12 GMT

 ಹೊಸದಿಲ್ಲಿ, ಆ.7: ಮಿಲಿಟರಿ ಪೊಲೀಸ್ ವಿಭಾಗಕ್ಕೆ 100 ಮಹಿಳಾ ಯೋಧರ ಎರಡನೇ ತಂಡದ ನೇಮಕಾತಿ ಪ್ರಕ್ರಿಯೆಗೆ ಸೇನೆ ಶುಕ್ರವಾರ ಚಾಲನೆ ನೀಡಿದೆ. ಈ ಬಗ್ಗೆ ಸೇನೆಯು ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಕನಿಷ್ಟ 10ನೇ ತರಗತಿ ತೇರ್ಗಡೆಯಾಗಿರುವ 17.5 ವರ್ಷದಿಂದ 21 ವರ್ಷದ ವರೆಗಿನ ಮಹಿಳೆಯರು ಅರ್ಹರಾಗಿದ್ದು ಆಗಸ್ಟ್ 31ರ ಒಳಗೆ ಅರ್ಜಿ ಸಲ್ಲಿಸಬೇಕು. ಜನವರಿ 2021ರ ವೇಳೆಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

 ಪ್ರತೀ ವರ್ಷ ಸೇನೆಗೆ 100 ಮಹಿಳಾ ಯೋಧರನ್ನು ನೇಮಕ ಮಾಡಿಕೊಳ್ಳುವ ಮೂಲಕ 2036ರ ವೇಳೆಗೆ ಸೇನೆಯಲ್ಲಿ 1,700 ಮಹಿಳಾ ಯೋಧರನ್ನು ಸೇರ್ಪಡೆಗೊಳಿಸುವ ಯೋಜನೆಯಿದೆ. ಅಗತ್ಯಬಿದ್ದರೆ ಹೆಚ್ಚುವರಿ ನೇಮಕಾತಿಯ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಸೇನೆ ತಿಳಿಸಿದೆ. ಸೇನೆಯಲ್ಲಿ ಮಾತ್ರ ಅಧಿಕಾರಿ ಹಂತದ ಕೆಳಗಿನ ಹುದ್ದೆಗೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News