ಕೊರೋನ ಕರ್ತವ್ಯದಲ್ಲಿ ಅಧಿಕಾರಿಗಳು, ವೈದ್ಯರು ನಿರ್ಲಕ್ಷ್ಯ ತೋರಿದರೆ ಅಮಾನತು: ಸಚಿವ ಭೈರತಿ ಬಸವರಾಜ್

Update: 2020-08-08 13:31 GMT

ಬೆಂಗಳೂರು ಆ.8: ಕೊರೋನ ಕರ್ತವ್ಯದಲ್ಲಿ ಯಾವುದೇ ಅಧಿಕಾರಿಗಳು ಹಾಗೂ ವೈದ್ಯರು ನಿರ್ಲಕ್ಷ್ಯ ತೋರಿದರೆ ಅವರನ್ನು ಕೂಡಲೇ ಅಮಾನತುಗೊಳಿಸುವಂತೆ ಅಧಿಕಾರಿಗಳಿಗೆ ಸಚಿವ ಭೈರತಿ ಬಸವರಾಜ್ ಸೂಚಿಸಿದ್ದಾರೆ.

ಕೊರೋನ ಸೊಂಕು ತಡೆ ಹಿನ್ನೆಲೆ ಮಹದೇವಪುರ ಬಿಬಿಎಂಪಿ ವಲಯ ಉಸ್ತುವಾರಿ ಸಚಿವ ಬಿ.ಎ ಬಸವರಾಜ ಶನಿವಾರ ಪ್ರಗತಿ ಪರಿಶೀಲನ ಸಭೆ ನಡೆಸಿ ಅವರು ಮಾತನಾಡಿದರು.

ಕೊರೋನ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆ ಸೂಕ್ತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಮುಂದಿನ ಸಭೆಯಲ್ಲಿ ಸೋಂಕು ಪ್ರಮಾಣ ಕಡಿಮೆ ಮಾಡಲೇಬೇಕು. ಕೊರೋನ ಸೊಂಕಿತರಾಗಲಿ, ಪ್ರಾಥಮಿಕ ಸಂಪರ್ಕಿತರಾಗಲಿ ರಸ್ತೆಗಿಳಿದರೆ ಅವರ ವಿರುದ್ಧ ಕಠಿಣಕ್ರಮ ಜರುಗಿಸಬೇಕು ಎಂದು ಹೇಳಿದರು.

ವಾರ್ಡ್ ಒಂದರಲ್ಲಿ ಪ್ರತಿ ದಿನ 150 ಸ್ವಾಬ್ ಟೆಸ್ಟ್ ಮಾಡಬೇಕು. ಕೊರೋನ ನಿರ್ವಹಣೆಯಲ್ಲಿ ಕಳಪೆ ಪ್ರದರ್ಶನ ಮಾಡಿದ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆ ಸದಸ್ಯ ರಮೇಶ್ ಮಾತನಾಡಿ, ನಮ್ಮ ವಾರ್ಡ್‍ನಲ್ಲಿ ಅತಿ ಹೆಚ್ಚು ಬಡವರಿದ್ದು ಸರಕಾರದಿಂದ ಸಿಗುತ್ತಿರುವ ಪಡಿತರಧಾನ್ಯ ಸಾಕಾಗುತ್ತಿಲ್ಲ ಹಾಗಾಗಿ ಇನ್ನು ಹೆಚ್ಚು ಪಡಿತರ ವಿತರಣೆ ಮಾಡುವಂತೆ ಮನವಿ ಮಾಡಿದರು, 

ಸಭೆಯಲ್ಲಿ ಐಎಎಸ್ ಅಧಿಕಾರಿ ಡಾ. ಮಂಜುಳಾ, ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್, ಡಿಸಿಪಿ ದೇವರಾಜ್, ಜಂಟಿ ಆಯುಕ್ತ ವೆಂಕಟಾಚಲಪತಿ, ತಹಶೀಲ್ದಾರ್ ತೇಜಸ್‍ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News