ಹಾಂಕಾಂಗ್ ಆಡಳಿತಾಧಿಕಾರಿ ವಿರುದ್ಧ ಅಮೆರಿಕ ದಿಗ್ಬಂಧನ

Update: 2020-08-08 15:27 GMT

ವಾಶಿಂಗ್ಟನ್, ಆ. 8: ಹಾಂಕಾಂಗ್ ಮುಖ್ಯ ಆಡಳಿತಾಧಿಕಾರಿ ಕ್ಯಾರೀ ಲ್ಯಾಮ್ ವಿರುದ್ಧ ಅಮೆರಿಕ ಶುಕ್ರವಾರ ದಿಗ್ಬಂಧನಗಳನ್ನು ವಿಧಿಸಿದೆ. ಇದು ಹಾಂಕಾಂಗ್ ಮೇಲೆ ಚೀನಾವು ರಾಷ್ಟ್ರೀಯ ಭದ್ರತಾ ಕಾನೂನನ್ನು ಹೇರಿದ ಬಳಿಕ, ಹಾಂಕಾಂಗ್‌ನ ಅಧಿಕಾರಿಗಳ ವಿರುದ್ಧ ಅಮೆರಿಕ ತೆಗೆದುಕೊಂಡಿರುವ ಅತ್ಯಂತ ಕಠಿಣ ಕ್ರಮವಾಗಿದೆ.

ಕ್ಯಾರೀ ಲ್ಯಾಮ್ ಮತ್ತು ಹಾಂಕಾಂಗ್‌ನ ಇತರ 10 ಹಿರಿಯ ಅಧಿಕಾರಿಗಳು ಅಮೆರಿಕದಲ್ಲಿ ಹೊಂದಿರುವ ಸೊತ್ತುಗಳನ್ನು ಮುಟ್ಟುಗೋಲು ಹಾಕುವುದಾಗಿ ಅಮೆರಿಕದ ಖಜಾನೆ ಇಲಾಖೆ ತಿಳಿಸಿದೆ.

ಕ್ಯಾರೀ ಲ್ಯಾಮ್, ಹಾಂಕಾಂಗ್ ಪೊಲೀಸ್ ಕಮಿಶನರ್, ಭದ್ರತಾ ಕಾರ್ಯದರ್ಶಿ ಮತ್ತು ಹಾಂಕಾಂಗ್‌ನಲ್ಲಿರುವ ಚೀನಾದ ಉನ್ನತ ಅಧಿಕಾರಿ ಸೇರಿದಂತೆ 11 ಮಂದಿಯೊಂದಿಗೆ ಅಮೆರಿಕನ್ನರು ಹಣಕಾಸು ವ್ಯವಹಾರಗಳನ್ನು ನಡೆಸುವುದನ್ನು ಅಮೆರಿಕದ ಈ ಕ್ರಮವು ಅಪರಾಧವನ್ನಾಗಿಸುತ್ತದೆ.

‘‘ಹಾಂಕಾಂಗ್ ಅಧಿಕಾರಿಗಳ ಕೃತ್ಯಗಳು ಅಸ್ವೀಕಾರಾರ್ಹ ಎಂಬ ಸ್ಪಷ್ಟ ಸಂದೇಶವನ್ನು ಇಂದಿನ ಕ್ರಮಗಳು ನೀಡುತ್ತವೆ’’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿಕೆಯೊಂದರಲ್ಲಿ ತಿಳಿಸಿದರು.

ಚೀನಾದ ರಾಷ್ಟ್ರೀಯ ಭದ್ರತಾ ಕಾನೂನು, ಹಾಂಕಾಂಗನ್ನು 1997ರಲ್ಲಿ ಬ್ರಿಟನ್ ಚೀನಾಕ್ಕೆ ಹಸ್ತಾಂತರಿಸುವ ಮೊದಲು ಚೀನಾ ನೀಡಿದ್ದ ಭಾಷೆಯನ್ನು ಉಲ್ಲಂಸಿದೆ ಎಂದು ಪಾಂಪಿಯೊ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News