ಹಾಂಕಾಂಗ್ ಮಾಧ್ಯಮ ದೊರೆ ಬಂಧನ; ಕೈಕೋಳ ತೊಡಿಸಿದ ಪೊಲೀಸರು

Update: 2020-08-10 17:50 GMT

ಹಾಂಕಾಂಗ್, ಆ. 10: ಹಾಂಕಾಂಗ್‌ನ ಪ್ರಜಾಪ್ರಭುತ್ವ ಪರ ಮಾಧ್ಯಮ ದೊರೆ ಜಿಮ್ಮಿ ಲಾಯ್‌ರನ್ನು ಪೊಲೀಸರು ಸೋಮವಾರ ಬಂಧಿಸಿದ್ದು, ಅವರ ಕಚೇರಿಯಿಂದ ಕೈಕೋಳ ತೊಡಿಸಿ ಒಯ್ದಿದ್ದಾರೆ.

ಇತ್ತೀಚೆಗೆ ಹಾಂಕಾಂಗ್ ಮೇಲೆ ಚೀನಾ ರಾಷ್ಟ್ರೀಯ ಭದ್ರತಾ ಕಾನೂನನ್ನು ಹೇರಿದ ಬಳಿಕ, ಭಿನ್ನಮತೀಯರ ದಮನ ಕಾರ್ಯಾಚರಣೆಯನ್ನು ವ್ಯಾಪಕವಾಗಿ ನಡೆಸಲಾಗುತ್ತಿದ್ದು, ಇದು ಅದರ ಮುಂದುವರಿದ ಭಾಗವಾಗಿದೆ.

71 ವರ್ಷದ ಲಾಯ್ ಅವರ ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿ ಶೋಧ ಕಾರ್ಯ ನಡೆಸಿದರು. ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿದ ಶಂಕೆಯಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದ್ದು, ಅದರಲ್ಲಿ ಲಾಯ್ ಮತ್ತು ಅವರ ಇಬ್ಬರು ಪುತ್ರರು ಕೂಡ ಸೇರಿದ್ದಾರೆ.

ಸುಮಾರು 200 ಪೊಲೀಸರು ಪತ್ರಿಕಾ ಕಚೇರಿಯಲ್ಲಿ ದಾಳಿ ನಡೆಸುತ್ತಿರುವ ನಾಟಕೀಯ ಸನ್ನಿವೇಶವನ್ನು ಚಿತ್ರೀಕರಿಸಿದ ಅಲ್ಲಿದ್ದ ಇತರ ಪತ್ರಕರ್ತರು, ವೀಡಿಯೊಗಳನ್ನು ಫೇಸ್‌ಬುಕ್‌ನಲ್ಲಿ ಪ್ರಸಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News