×
Ad

ಜಮ್ಮು ಕಾಶ್ಮೀರ: ಗಡಿಭಾಗದಲ್ಲಿ ಪಾಕ್ ಪಡೆಗಳಿಂದ ಗುಂಡಿನ ದಾಳಿ

Update: 2020-08-10 23:24 IST

ಶ್ರೀನಗರ, ಆ.10: ಪಾಕಿಸ್ತಾನದ ಸೇನಾಪಡೆ ಗಡಿಭಾಗದಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿಯನ್ನು ಸೋಮವಾರವೂ ಮುಂದುವರಿಸಿದ್ದು ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ ಎಂದು ಸೇನಾಪಡೆಯ ವಕ್ತಾರರು ಹೇಳಿದ್ದಾರೆ.

 ಸೋಮವಾರ ಬೆಳಿಗ್ಗೆ 10:15ಕ್ಕೆ ಜಮ್ಮು ಕಾಶ್ಮೀರದ ಪೂಂಚ್ ವಲಯದ ಗಡಿನಿಯಂತ್ರಣ ರೇಖೆಯಲ್ಲಿ ಭಾರತದ ಸೇನಾನೆಲೆಯನ್ನು ಗುರಿಯಾಗಿಸಿ ಪಾಕ್ ಪಡೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತದ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ. ಅಲ್ಲದೆ ಇದೇ ವಲಯದ ತಾರ್ಕುಂಡಿ ಗ್ರಾಮದ ಮೇಲೆ ಪಾಕಿಸ್ತಾನದ ಸೇನೆ ಮಾರ್ಟರ್ ಶೆಲ್‌ನಿಂದ ದಾಳಿ ನಡೆಸಿದ್ದರಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ರವಿವಾರ ಪಾಕ್ ಪಡೆ ಮನ್‌ಕೋಟ್, ಶಹಾಪುರ, ಕಿರ್ನಿ ಮತ್ತು ಕೃಷ್ಣಾ ಘಾಟಿ ವಲಯದಲ್ಲಿ ಭಾರೀ ಗುಂಡಿನ ದಾಳಿ ನಡೆಸಿವೆ ಎಂದು ವಕ್ತಾರರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News