ಭೂತಾನ್: ದೇಶಾದ್ಯಂತ ಮೊದಲ ಕೊರೋನ ಲಾಕ್‌ಡೌನ್

Update: 2020-08-11 17:22 GMT

ಥಿಂಪು (ಭೂತಾನ್), ಆ. 11: ಕುವೈತ್‌ನಿಂದ ಮರಳಿರುವ ಭೂತಾನ್ ಪ್ರಜೆಯೊಬ್ಬರಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭೂತಾನ್ ಮಂಗಳವಾರ ತನ್ನ ಮೊದಲ ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿದೆ.

27 ವರ್ಷದ ಮಹಿಳೆಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಅವರನ್ನು ಪರೀಕ್ಷಿಸಿದಾಗ ಅವರಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ಹಾಗಾಗಿ ಅಲ್ಲಿಂದ ಬಿಡುಗಡೆಗೊಂಡು ಬಂದ ಬಳಿಕ ಸೋಮವಾರ ಕ್ಲಿನಿಕ್ ಒಂದರಲ್ಲಿ ತಪಾಸಣೆಗೊಳಗಾದಾಗ ಅವರಲ್ಲಿ ಸೋಂಕು ಇರುವುದು ಪತ್ತೆಯಾಗಿತ್ತು. ಅದಾಗಲೇ ಅವರು ರಾಜಧಾನಿ ಥಿಂಪುನಲ್ಲಿ ಹಲವರ ಸಂಪರ್ಕಕ್ಕೆ ಬಂದಿದ್ದರು. ಹೀಗಾಗಿ, ದೇಶಾದ್ಯಂತ ಪ್ರಥಮ ಲಾಕ್‌ಡೌನ್ ಘೋಷಿಸಲಾಗಿದೆ.

7.50 ಲಕ್ಷ ಜನಸಂಖ್ಯೆಯ ಬೌದ್ಧ ಬಾಹುಳ್ಯದ ದೇಶದಲ್ಲಿ ಈವರೆಗೆ 113 ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಹಿಮಾಲಯನ್ ದೇಶದಲ್ಲಿ ಈವರೆಗೆ ಸಾವು ಸಂಭವಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News