ಶಿಕಾಗೊ: ಲೂಟಿಯಲ್ಲಿ ತೊಡಗಿದ ಜನರು

Update: 2020-08-11 17:30 GMT

ಶಿಕಾಗೊ (ಅಮೆರಿಕ), ಆ. 11: ಅಮೆರಿಕದ ಶಿಕಾಗೊ ನಗರದ ವಿಲಾಸಿ ವಾಣಿಜ್ಯ ಜಿಲ್ಲೆಯಲ್ಲಿ ಸೋಮವಾರ ಲೂಟಿಯಲ್ಲಿ ತೊಡಗಿದ ಜನರ ಗುಂಪೊಂದನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ, ದುಷ್ಕರ್ಮಿಗಳು ಗಂಟೆಗಳ ಕಾಲ ಅಂಗಡಿಗಳನ್ನು ದೋಚಿದರು, ಕಿಟಕಿಗಳನ್ನು ಒಡೆದರು ಹಾಗೂ ಪೊಲೀಸರೊಂದಿಗೆ ಹೊಯ್‌ಕೈ ನಡೆಸಿದರು. 100ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ಇದು ಸಂಪೂರ್ಣ ಕ್ರಿಮಿನಲ್ ಕೃತ್ಯ’’ ಎಂಬುದಾಗಿ ಪೊಲೀಸ್ ಸೂಪರಿಂಟೆಂಡೆಂಟ್ ಡೇವಿಡ್ ಬ್ರೌನ್ ಬಣ್ಣಿಸಿದ್ದಾರೆ. ಇದು ಮೇ 25ರಂದು ಮಿನಪೊಲಿಸ್ ಪೊಲೀಸರ ಕೈಯಲ್ಲಿ ಹತರಾಗಿರುವ ಜಾರ್ಜ್ ಫ್ಲಾಯ್ಡಾ ಸಾವಿನ ವಿರುದ್ಧದ ಪ್ರತಿಭಟನೆಯಲ್ಲ ಎಂದು ಶಿಕಾಗೊ ಮೇಯರ್ ಲೊರಿ ಲೈಟ್‌ಫೂಟ್ ಹೇಳಿದ್ದಾರೆ.

ಕನಿಷ್ಠ 13 ಪೊಲೀಸರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಓರ್ವ ಕಾವಲುಗಾರ ಮತ್ತು ಓರ್ವ ನಾಗರಿಕನಿಗೆ ಗುಂಡಿನ ಗಾಯವಾಗಿದೆ ಎಂದು ಬ್ರೌನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News