ಕಮಲಾ ಹ್ಯಾರಿಸ್‌ರ ಹುಟ್ಟಿನ ಬಗ್ಗೆ ವಿವಾದ ಎಬ್ಬಿಸಿದ ಟ್ರಂಪ್

Update: 2020-08-14 16:27 GMT

ವಾಶಿಂಗ್ಟನ್, ಆ. 14: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್‌ರ ಹುಟ್ಟಿನ ಬಗ್ಗೆ ಜನಾಂಗೀಯ ಪ್ರೇರಿತ ವಿವಾದವೊಂದನ್ನು ಎಬ್ಬಿಸಿದ್ದಾರೆ. ಅವರು ಈ ಹಿಂದೆ ಮಾಜಿ ಅಧ್ಯಕ್ಷ ಬರಾಕ್ ಒಬಾಮರ ಹುಟ್ಟಿನ ಬಗ್ಗೆಯೂ ವಿವಾದವೊಂದನ್ನು ಸೃಷ್ಟಿಸುವ ಪ್ರಯತ್ನಗಳನ್ನು ಮಾಡಿದ್ದರು.

ಕಮಲಾರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಪಕ್ಷವು ಘೋಷಿಸಿದ ಬಳಿಕ, ಕೆಲವು ಬಲಪಂಥೀಯರು ಹುದ್ದೆಗೆ ಅವರ ಅರ್ಹತೆಯನ್ನು ಪ್ರಶ್ನಿಸಿದ್ದಾರೆ. ಕಮಲಾ ಹುಟ್ಟಿದ್ದು ಅಮೆರಿಕದಲ್ಲೇ ಆದರೂ, ಅವರ ತಾಯಿ ಭಾರತದವರು ಹಾಗೂ ತಂದೆ ಜಮೈಕಾದವರು. ಆ ಸಮಯದಲ್ಲಿ ಅವರ ಹೆತ್ತವರು ಅಮೆರಿಕದ ಪ್ರಜೆಗಳಾಗಿರಲಿಲ್ಲ ಎಂದು ಅವರು ಹೇಳುತ್ತಿದ್ದಾರೆ.

‘‘ಉಪಾಧ್ಯಕ್ಷ ಹುದ್ದೆಗೆ ಅವರು ಅರ್ಹತೆಯನ್ನು ಹೊಂದಿಲ್ಲ ಎನ್ನುವುದನ್ನು ನಾನು ಇಂದು ಕೇಳಿದೆ. ಹಾಗೂ ಈ ಅಭಿಪ್ರಾಯವನ್ನು ಬರೆದ ವಕೀಲರು ಅತ್ಯಂತ ಶಿಕ್ಷಿತರು ಹಾಗೂ ಅಗಾಧ ಪ್ರತಿಭಾವಂತರು’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News