ನಾಪತ್ತೆಯಾದ ಆರೋಪಿಗಳನ್ನು ಪತ್ತೆ ಹಚ್ಚುವ ಎಫ್‌ಆರ್‌ಎಸ್ ಪರೀಕ್ಷೆಯಲ್ಲಿ ಗುಜರಾತ್ ಪೊಲೀಸರು ಯಶಸ್ವಿ

Update: 2020-08-15 17:32 GMT

ವಡೋದರಾ, ಆ. 15: ಅಪರಾಧ ನಿಗ್ರಹ ಹಾಗೂ ಕಾನೂನು ಜಾರಿ ಸಬಲಗೊಳಿಸಲು ವಡೋದರಾ ನಗರದಲ್ಲಿ ಕೃತಕ ಬುದ್ಧಿಮತ್ತೆ ಆಧಾರವಾಗಿ ಉಳ್ಳ ಮುಖ ಗುರುತಿಸುವ ವ್ಯವಸ್ಥೆ (ಫೇಶಿಯಲ್ ರೆಕೊಗ್ನಿಶನ್ ಸಿಸ್ಟಮ್) ಪರೀಕ್ಷೆಯನ್ನು ಗುಜರಾತ್ ಪೊಲೀಸರು ಯಶಸ್ವಿಯಾಗಿ ನಡೆಸಿದ್ದಾರೆ.

ವಡೋದರಾ ನಗರ ಎಫ್‌ಆರ್‌ಎಸ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಇದು ಕಾನೂನು ಜಾರಿಯಲ್ಲಿ ವಡೋದರಾ ಸಿಟಿ ಪೊಲೀಸ್‌ರಿಗೆ ನೆರವಾಗಲಿದೆ ಎಂದು ವಡೋದರಾ ನಗರ ರೆನ್ 2ರ ಉಪ ಪೊಲೀಸ್ ಆಯುಕ್ತ ಸಂದೀಪ್ ಚೌಧರಿ ಹೇಳಿದ್ದಾರೆ. ರಾಜ್ಯದಲ್ಲಿ ವಡೋದರಾ ಸಿಟಿ ಪೊಲೀಸರು ಮೊದಲ ಬಾರಿಗೆ ಎಫ್‌ಆರ್‌ಎಸ್ ಬಳಸಲಿದ್ದಾರೆ. ಈ ವ್ಯವಸ್ಥೆ ಯಲ್ಲಿ ಸಿಸಿಟಿವಿ ನೆಟ್‌ವರ್ಕ್ ಹಾಗೂ ಡಾಟಾಬೇಸ್ ಅನ್ನು ಬಳಸಿ ತಲೆ ಮರೆಸಿಕೊಂಡವರ, ನಾಪತ್ತೆಯಾದ ಮಕ್ಕಳ ಹಾಗೂ ಇದುವರೆಗೆ ಪತ್ತೆಯಾಗದ ಕ್ರಿಮಿನಲ್ಸ್‌ಗಳನ್ನು ಬಂಧಿಸಬಹುದು ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಇರುವ ಡಾಟಾಬೇಸ್‌ನಲ್ಲಿ ಕ್ರಿಮಿನಲ್‌ಗಳು ಹಾಗೂ ನಾಪತ್ತೆಯಾದವರ ವಿವರಗಳನ್ನು ಅಪ್‌ಲೋಡ್ ಮಾಡಲಾಗಿದೆ. ಸಿಸಿಟಿವಿ ನೆಟ್‌ವರ್ಕ್‌ನಲ್ಲಿ ಈ ಇವರು ಕಾಣಿಸಿಕೊಂಡ ಕೂಡಲೇ ಎಫ್‌ಆರ್‌ಎಸ್ ಅವರ ಖಚಿತ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತದೆ ಎಂದು ಚೌಧರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News