×
Ad

ಟರ್ಕಿಯ ಪ್ರಥಮ ಮಹಿಳೆ ಎಮಿನೆ ಎರ್ದೊಗಾನ್ ರನ್ನು ಭೇಟಿಯಾದ ಆಮಿರ್ ಖಾನ್

Update: 2020-08-17 14:52 IST

ಹೊಸದಿಲ್ಲಿ: ಬಾಲಿವುಡ್ ನಟ ಆಮಿರ್ ಖಾನ್ ಅವರು ಟರ್ಕಿ ದೇಶದ ಪ್ರಥಮ ಮಹಿಳೆ, ರಿಸೆಪ್ ತಯ್ಯಿಬ್ ಎರ್ದೊಗಾನ್ ಅವರ ಪತ್ನಿ ಎಮಿನೆ ಎರ್ದೊಗಾನ್ ರನ್ನು ಭೇಟಿಯಾಗಿದ್ದು, ಅವರು ಮಾತುಕತೆ ನಡೆಸುತ್ತಿರುವ ಫೋಟೊಗಳು ವೈರಲ್ ಆಗಿವೆ.

ತಮ್ಮ ಮುಂಬರುವ ಚಿತ್ರ ‘ಲಾಲ್ ಸಿಂಗ್ ಛಡ್ಡಾ’ ಶೂಟಿಂಗ್‍ ಗಾಗಿ ಟರ್ಕಿಗೆ ತೆರಳಿದ್ದ ವೇಳೆ ಆಮಿರ್ ಅಲ್ಲಿನ ಪ್ರಥಮ ಮಹಿಳೆಯನ್ನು ಭೇಟಿಯಾಗಿದ್ದರು. ಈ ಭೇಟಿಯ ಚಿತ್ರಗಳನ್ನು ಎಮಿನೆ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ‍ನಲ್ಲಿ ಶೇರ್ ಮಾಡಿದ್ದಾರೆ. ಆಮಿರ್ ಅವರನ್ನು ಜಗದ್ವಿಖ್ಯಾತ ನಟ ಎಂದು ಬಣ್ಣಿಸಿದ್ದಾರಲ್ಲದೆ ಅವರ ಚಲನಚಿತ್ರಕ್ಕಾಗಿ ಎದುರು ನೋಡುತ್ತಿರುವುದಾಗಿಯೂ ಬರೆದಿದ್ದಾರೆ.

“ಜಗದ್ವಿಖ್ಯಾತ ಭಾರತೀಯ ನಟ, ಚಿತ್ರ ತಯಾರಕ, ನಿರ್ದೇಶಕ ಆಮಿರ್ ಖಾನ್ ಆವರನ್ನು ಇಸ್ತಾಂಬುಲ್ ‍ನಲ್ಲಿ ಭೇಟಿಯಾಗಲು ಖುಷಿಯಾಯಿತು. ಟರ್ಕಿಯ ವಿವಿಧೆಡೆ ತಮ್ಮ ಲೇಟೆಸ್ಟ್ ಚಿತ್ರ `ಲಾಲ್ ಸಿಂಗ್ ಛಡ್ಡಾ' ಇದರ ಶೂಟಿಂಗ್  ಮುಗಿಸಿದ್ದಾರೆಂದು ತಿಳಿಯಿತು. ಅದನ್ನು ನೋಡಲು ಕಾತರಳಾಗಿದ್ದೇನೆ,'' ಎಂದು ಎಮಿನೆ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News