​ವೀಸಾ ವಂಚನೆ ಹಗರಣ: ಭಾರತೀಯನ ಬಂಧನ

Update: 2020-08-22 04:05 GMT

ವಾಷಿಂಗ್ಟನ್: ಅಮೆರಿಕದಲ್ಲಿ ವೀಸಾ ವಂಚನೆಗೆ ಪಿತೂರಿ ನಡೆಸಿದ ಆರೋಪದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ನಕಲಿ ಎಚ್-1ಬಿ ವೀಸಾ ನೀಡುವ ಮೂಲಕ ವಿದೇಶಿಯರು ಅಮೆರಿಕಕ್ಕೆ ಆಗಮಿಸುವಂತೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಆಶೀಶ್ ಸಹ್ವಾನಿ (48) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಎಚ್-1ಬಿ ವೀಸಾಗೆ ನಕಲಿ ಅರ್ಜಿಗಳನ್ನು ಸಲ್ಲಿಸುವ ಸಲುವಾಗಿ ನಾಲ್ಕು ಕಾರ್ಪೊರೇಷನ್‌ಗಳನ್ನು ಈತ ಬಳಸಿಕೊಂಡಿದ್ದ ಎನ್ನಲಾಗಿದೆ.

ಅಮೆರಿಕದಲ್ಲಿ ವಾಣಿಜ್ಯ ಲಾಭಕ್ಕಾಗಿ ನೆಲೆಸುವುದೂ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದ್ದು, 2011ರಿಂದ 2016ರ ಅವಧಿಯಲ್ಲಿ 21 ದಶಲಕ್ಷ ಡಾಲರ್ ಲಾಭ ಸೃಷ್ಟಿಸಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ವಾಷಿಂಗ್ಟನ್ ಡಿಸಿಯ ವರ್ಜೀನಿಯಾ ಉಪನಗರದ ಸ್ಟೆರ್ಲಿಂಗ್ ನಿವಾಸಿಯಾದ ಈತ ಎಚ್-1ಬಿ ವೀಸಾಗಾಗಿ ವಿದೇಶಿ ಉದ್ಯೋಗಿಗಳ ಹೆಸರಿನಲ್ಲಿ ಅರ್ಜಿ ಸಲ್ಲಿಸುತ್ತಿದ್ದ. ನಿರ್ದಿಷ್ಟ ಉದ್ಯೋಗಕ್ಕಾಗಿ ವಿದೇಶಿ ಉದ್ಯೋಗಿಗಳ ಹೆಸರಿನಲ್ಲಿ ಅರ್ಜಿ ಸಲ್ಲಿಸುತ್ತಿದ್ದರೂ, ವಾಸ್ತವವಾಗಿ ಅಂಥ ಉದ್ಯೋಗವೇ ಇರುತ್ತಿರಲಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News