×
Ad

‘ಅರ್ಜುನ ಪ್ರಶಸ್ತಿ ಪಡೆಯಲು ನಾನ್ಯಾವ ಸಾಧನೆ ಮಾಡಬೇಕು?'

Update: 2020-08-24 13:57 IST

ಹೊಸದಿಲ್ಲಿ: ಈ ಬಾರಿಯ ಅರ್ಜುನ ಪ್ರಶಸ್ತಿ ವಿಜೇತರ ಪೈಕಿ ಒಬ್ಬರಾಗುವ ಕನಸು ಕಂಡಿದ್ದ ಒಲಿಂಪಿಕ್ಸ್ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್, ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೇ ಇರುವುದರಿಂದ ತೀವ್ರ ನಿರಾಶರಾಗಿದ್ದಾರೆ. ರಿಯೋ ಒಲಿಂಪಿಕ್ಸ್‍ ನಲ್ಲಿ ಕಂಚಿನ ಪದಕ ಪಡೆದು ಒಲಿಂಪಿಕ್ಸ್ ‍ನಲ್ಲಿ ಪದಕ ಪಡೆದ ಪ್ರಥಮ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಾಕ್ಷಿ ಈಗಾಗಲೇ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದಿರುವುದರಿಂದ ಅವರನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿರಲಿಲ್ಲ.

ಈ ಕುರಿತಂತೆ ಟ್ವೀಟ್ ಮಾಡಿರುವ ಸಾಕ್ಷಿ, ತಾನು ಅರ್ಜುನ ಪ್ರಶಸ್ತಿಯನ್ನು ಗೆಲ್ಲಬೇಕಿದ್ದರೆ ಇನ್ನು ಯಾವ ಸಾಧನೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರನ್ನು ಪ್ರಶ್ನಿಸಿದ್ದಾರೆ.

“ಹಾಗಾದರೆ ನನ್ನಲ್ಲಿ ಒಲಿಂಪಿಕ್ಸ್ ಪದಕ ಇರುವುದರಿಂದ ನಾನು ಕೇವಲ ಒಲಿಂಪಿಕ್ಸ್ ನಲ್ಲಿ ಭಾಗವಹಿಸಬೇಕು, ಕಾಮನ್ವೆಲ್ತ್ ಹಾಗೂ ಏಷ್ಯ್ ಗೇಮ್ಸ್‍ನಲ್ಲಿ ಆಡುವುದು ಬೇಡವೇ?, ಖೇಲ್ ರತ್ನ ಪ್ರಶಸ್ತಿ ಪಡೆದಿದ್ದರೆ ಅರ್ಜುನ ಪ್ರಶಸ್ತಿ ಪಡೆಯಲು ಸಾಧ್ಯವಿಲ್ಲವೆನ್ನುವ ತರ್ಕ ಏನಿದು?, ಪ್ರತಿಯೊಂದು ಪ್ರಶಸ್ತಿಗೂ ಅದರದ್ದೇ ಆದ ಮೌಲ್ಯವಿದ್ದು ನನಗೆ ಪ್ರತಿಯೊಂದು ಪ್ರಶಸ್ತಿ ಗೆಲ್ಲಬೇಕಿದೆ,  ಅರ್ಜುನ ಪ್ರಶಸ್ತಿ ಪಡೆಯುವ ಹಕ್ಕು ನನಗಿರುವುದರಿಂದ ನನಗೀಗ ನಿರಾಸೆಯಾಗಿದೆ'' ಎಂದು ಸಾಕ್ಷಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News