ಗಾಝಾ: ಹಮಾಸ್ ನೆಲೆಗಳ ಮೇಲೆ ಇಸ್ರೇಲ್ ದಾಳಿ

Update: 2020-08-28 17:33 GMT

ಗಾಝಾ ಸಿಟಿ,ಆ.28: ಪಶ್ಚಿಮದಂಡೆಯ ಗಾಝಾ ಪ್ರದೇಶದಿಂದ ಫೆಲೆಸ್ತೀನ್ ಹೋರಾಟಗಾರರು , ಇಸ್ರೇಲ್ ಗಡಿಯ ಮೇಲೆ ಸರಣಿ ರಾಕೆಟ್ ದಾಳಿ ನಡೆದ ಬೆನ್ನಲ್ಲೇ ಗಾಝಾದಲ್ಲಿರುವ ಬಂಡುಕೋರರ ನೆಲೆಗಳ ಮೇಲೆ ಹೆಲಿಕಾಪ್ಟರ್ ಹಾಗೂ ಟ್ಯಾಂಕ್‌ಗಳ ಮೂಲಕ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಆದಾಗ್ಯೂ ಎರಡೂ ಕಡೆಗಳಿಂದಲೂ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಆದಾಗ್ಯೂ, ಗಾಝಾಪಟ್ಟಿ ಪ್ರದೇಶದಲ್ಲಿನ ಪರಿಸ್ಥಿತಿಯು ಕ್ಷಿಪ್ರವಾಗಿ ಹದಗೆಡುತ್ತಾ ಹೋಗುತ್ತಿದೆಯೆಂದು ವಿಶ್ವಸಂಸ್ಥೆಯ ಮಧ್ಯಪ್ರಾಚ್ಯ ರಾಯಭಾರಿ ಎಚ್ಚರಿಕೆ ನೀಡಿದ್ದಾರೆ. ಕೊರೋನ ವೈರಸ್ ಹಾವಳಿ ಹಾಗೂ ಹೋರಾಟಗಾರರು ಮತ್ತು ಇಸ್ರೇಲಿ ಸೇನೆಯ ನಡುವಿನ ಸಂಘರ್ಷದಿಂದ ಗಾಝಾಪ್ರದೇಶದಲ್ಲಿ ಜನಜೀವನ ದುಸ್ತರವಾಗುತ್ತಿದೆಯೆಂದು ಅವರು ಹೇಳಿದ್ದಾರೆ.

  ಇತ್ತೀಚಿನ ವಾರಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಇಸ್ರೇಲ್ ಹಾಗೂ ಫೆಲೆಸ್ತೀನ್ ಹೋರಾಟಗಾರ ಗುಂಪು ಹಮಾಸ್ ನಡುವಿನ ಘರ್ಷಣೆ ಉಲ್ಬಣಿಸಿದೆ. ಹಮಾಸ್ ಜೊತೆ ನಂಟು ಹೊಂದಿರುವ ಹೋರಾಟಗಾರರು ಇಸ್ರೇಲಿ ಗಡಿ ಮುಂಚೂಣಿ ಭಾಗದ ಮೇಲೆ ದಹನಕಾರಕ ಬಲೂನುಗಳ ಹಿಂಡುಗಳನ್ನೇ ಉಡಾಯಿಸುತ್ತಿದ್ದು, ಅವು ಇಸ್ರೇಲಿನ ಗಡಿಮುಂಚೂಣಿ ಪ್ರದೇಶಗಳಲ್ಲಿ ಪತನಗೊಂಡಾಗ ಜಮೀನಿಗೆ ಬೆಂಕಿ ಹತ್ತಿಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News