ಎಸೆಕ್ಸ್: ವಲಸೆ ಕಾರ್ಮಿಕರ ಮೃತದೇಹ ಪತ್ತೆ ಪ್ರಕರಣ: ತಪ್ಪೊಪ್ಪಿಕೊಂಡ ರೊನಾನ್ ಹ್ಯೂಸ್

Update: 2020-08-29 19:01 GMT

 ಲಂಡನ್, ಆ.29: ಕಳೆದ ವರ್ಷದ ಅಕ್ಟೋಬರ್ 23ರಂದು ಎಸೆಕ್ಸ್‌ನಲ್ಲಿ ಲಾರಿ ಕಂಟೈನರ್ ಒಳಗಡೆ 39 ವಿಯೆಟ್ನಾಮ್ ವಲಸೆ ಕಾರ್ಮಿಕರ ಮೃತದೇಹ ಪತ್ತೆಯಾಗಿರುವುದು ಮಾನವ ಹತ್ಯೆಯ ಮತ್ತು ಅಕ್ರಮ ವಲಸೆಗೆ ನೆರವಾಗುವ ಪ್ರಕರಣವಾಗಿದೆ ಎಂದು ರೊನಾನ್ ಹ್ಯೂಸ್ ಎಂಬ ವ್ಯಕ್ತಿ ಒಪ್ಪಿಕೊಂಡಿದ್ದಾನೆ.

ಗ್ರೇಸ್ ನಗರದಲ್ಲಿ ರೆಫ್ರಿಜರೇಟೆಡ್ ಕಂಟೈನರ್(ಶೀತಲೀಕರಣ ವ್ಯವಸ್ಥೆಯ ಲಾರಿ)ನಲ್ಲಿ ಮಹಿಳೆಯರು, ಮಕ್ಕಳ ಸಹಿತ 39 ಕಾರ್ಮಿಕರ ಮೃತದೇಹ ಪತ್ತೆಯಾಗಿತ್ತು. ಬೆಲ್ಜಿಯಂನಿಂದ ಹಡಗಿನ ಮೂಲಕ ಆಗಮಿಸಿದ ಕಂಟೈನರ್ ಲಾರಿಯೊಳಗಡೆ ವಿಯೆಟ್ನಾಮ್‌ನ ವಲಸೆ ಕಾರ್ಮಿಕರನ್ನು ಅಕ್ರಮವಾಗಿ ಕರೆತಂದಿದ್ದ ಪ್ರಕರಣ ಇದಾಗಿತ್ತು. ಕಂಟೈನರ್‌ನಲ್ಲಿ ಉಸಿರು ಕಟ್ಟಿ ಮತ್ತು ಅತ್ಯಂತ ತಂಪು ವಾತಾವರಣದಿಂದ ದೇಹದ ಉಷ್ಣಾಂಶ ಏರುಪೇರಾಗಿ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿತ್ತು. ಪ್ರಕರಣದಲ್ಲಿ ರೊನಾನ್ ಹ್ಯೂಸ್ ಮತ್ತು ಎಮಾನ್ನ್ ಹ್ಯಾರಿಸನ್‌ರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಹ್ಯೂಸ್ ಆರೋಪ ಒಪ್ಪಿಕೊಂಡಿದ್ದರೆ, ಹ್ಯಾರಿಸನ್ ನಿರಾಕರಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News